ಚಿತ್ರದುರ್ಗ: ನಗರದ ಮಾರುಕಟ್ಟೆಗೆ ತೆರಳಿದ ಎಸ್ಪಿ ಜಿ.ರಾಧಿಕಾ, ಮಾರುಕಟ್ಟೆ ರೌಂಡ್ಸ್ ಹಾಕಿ ಜನರು ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ ಬಳಿ ಗುಂಪಾಗಿ ಜನ ಸೇರದಂತೆ ಸೂಚಸಿದರು. ತರಕಾರಿ ಮಾರುಕಟ್ಟೆಗೆ ಬ್ಯಾರಿಕೇಡ್ ಹಾಕಿ ಜನಸಂದಣಿಗೆ ಬ್ರೇಕ್ ಹಾಕಿದರು. ಬಳಿಕ ದಿನಸಿ ಅಂಗಡಿ ಬಳಿ ವೈಟ್ ಮಾರ್ಕ್ ಮಾಡಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಿದರು.
ಬಳಿಕ ಮಾತನಾಡಿದ ಅವರು, ತರಕಾರಿ, ದಿನಸಿ, ಮೆಡಿಸಿನ್ನಂತಹ ಅಗತ್ಯ ವಸ್ತುಗಳು ಜನರಿಗೆ ಲಭ್ಯವಿದ್ದು, ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಸೇರದಂತೆ ಕ್ರಮ ವಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 6 ಕಡೆ ಚೆಕ್ ಪೋಸ್ಟ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 17 ಲಕ್ಷ ಜನರಿದ್ದಾರೆ. 1,500ಕ್ಕೂ ಅಧಿಕ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಜನ ಸಹಕಾರಿಸಿದರೆ ಮಾತ್ರ ಲಾಕ್ಡೌನ್ ಯಶಸ್ವಿಯಾಗಿಸಲು ಸಾಧ್ಯ. ಲಾಕ್ಡೌನ್ ಘೋಷಣೆಯ ಕಾರಣವನ್ನು ಜನ ಅರ್ಥ ಮಾಡಿಕೊಳ್ಳಲಿ. ನಿನ್ನೆಗೆ ಹೋಲಿಸಿದರೆ ಇಂದು ಲಾಕ್ಡೌನ್ ಉತ್ತಮವಾಗಿದೆ. ಏಪ್ರಿಲ್ 14ರವರೆಗೆ ಲಾಕ್ಡೌನ್ಗೆ ಪೊಲೀಸ್ ಇಲಾಖೆ ಸಿದ್ಧವಾಗಿದೆ ಎಂದರು.