ಚಿತ್ರದುರ್ಗ: ಭಗವಂತನೇ ಕೊರೊನಾದಿಂದ ನಮ್ಮನ್ನು ಕಾಪಾಡಬೇಕು ಎಂಬ ಹೇಳಿಕೆಗೆ ಸಚಿವ ಶ್ರೀ ರಾಮುಲು ಸ್ಪಷ್ಟನೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ಮುಗಿದ ಬಳಿಕ ಮಾತನಾಡಿದ ಅವರು, ಭಗವಂತನೇ ಕೊರೊನಾದಿಂದ ಕಾಪಾಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು. ಅಸಹಾಯಕತೆಯಿಂದ ಭಗವಂತನೇ ಕಾಪಾಡಬೇಕು ಎಂದು ನಾನು ಹೇಳಿಲ್ಲ. ಮುಖ್ಯಮಂತ್ರಿ ಬಿಎಸ್ವೈ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಸೇರಿ ಇತರ ಕೆಲ ಜಿಲ್ಲೆಗಳನ್ನೂ ಲಾಕ್ಡೌನ್ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಜನರು ಸಹಕಾರ ನೀಡಬೇಕು. ಜನರ ಸಹಕಾರದ ಜೊತೆ ದೇವರು ಸಹ ನಮ್ಮನ್ನು ಕಾಪಾಡಬೇಕು ಎಂದಿದ್ದೇನೆ.
ಕೊರೊನಾಗೆ ವ್ಯಾಕ್ಸಿನ್ ಬಂದರೂ ಅಂತಿಮವಾಗಿ ನಮ್ಮನ್ನೆಲ್ಲ ಕಾಪಾಡುವುದು ದೇವರು ಎಂದಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.