ಚಿತ್ರದುರ್ಗ: ಸಿಡಿಲಿಗೆ ಏಳು ಜನರು ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೊಳಲ್ಕೆರೆ ತಾಲೂಕಿನ ಸಿಹಿನೀರುಕಟ್ಟೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಚಂದ್ರಾಬಾಯಿ, ರತ್ನಾಬಾಯಿ, ರುದ್ರಿಬಾಯಿ, ಸಾಕಿಬಾಯಿ, ರಂಗನಾಯಕ, ವೆಂಕಟೇಶ ಎಂಬುವರು ಗಾಯಗೊಂಡಿದ್ದು, ಇವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ರಾಮಗಿರಿ ಸಿದ್ದರಾಮಯ್ಯ ಬಡಾವಣೆಯಲ್ಲಿ ಗುಡಿಸಲುಗಳು ನೆಲಕ್ಕುರುಳಿವೆ. ಮಳೆ, ಗಾಳಿ ರಭಸಕ್ಕೆ ಸಿದ್ದರು, ಅಲೆಮಾರಿ ಜನಾಂಗದವರ ಸುಮಾರು 50ಕ್ಕೂ ಹೆಚ್ಚು ಗುಡಿಸಲುಗಳು ಬಿದ್ದಿವೆ. ಕೆಲ ಗುಡಿಸಲಿನ ಮೇಲ್ಛಾವಣಿ ಹಾರಿ ಹೋಗಿವೆ.