ಚಿತ್ರದುರ್ಗ: ಜಿಲ್ಲೆಯಲ್ಲಿ ಚಿಪ್ಪು ಹಂದಿ ಬೇಟೆಯಾಡಿ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದ ತಂಡದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಭರ್ಜರಿ ಕಾರ್ಯಾಚರಣೆ : ಚಿಪ್ಪು ಹಂದಿ ಮಾರಾಟದ ಮಾಹಿತಿ ಅರಿತ ಹೊಳಲ್ಕೆರೆಯ ವಲಯ ಅಧಿಕಾರಿ ವಸಂತ್ ಕುಮಾರ್, ಚಿತ್ರದುರ್ಗ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕ ರಘುರಾಮ್ ನೇತೃತ್ವದ ವಿಶೇಷ ತಂಡ ಬುಧವಾರ ರಾತ್ರಿ ಕಾರ್ಯಾಚರಣೆಗೆ ಇಳಿದು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಬಂಧಿತರು ಹೊಳಲ್ಕೆರೆ ಹೊಸದುರ್ಗ ಮತ್ತು ಹಿರಿಯೂರು ತಾಲೂಕಿನವರು.
3.5 ಕೆಜಿ ಹಂದಿಯ ಚಿಪ್ಪು ವಶ: ಬಂಧಿತರಿಂದ 3.5 ಕೆಜಿ ಹಂದಿಯ ಚಿಪ್ಪುಗಳು, ಎಂಟು ಮೊಬೈಲ್ ಹಾಗೂ ಎರಡು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟ, ಕುಡಿದ ಮತ್ತಿನಲ್ಲಿ ಪತ್ನಿ ಹತ್ಯೆಗೈದ ಪತಿ