ಹಾವೇರಿ: ಮಳೆ ಬಂದಾಗಲೆಲ್ಲ ಪ್ರವಾಸಿ ಮಂದಿರದ ಮುಂದೆ ನೀರು ನುಗ್ಗುವುದಕ್ಕೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಕಾರಣ ಎಂದು ಶಾಸಕ ನೆಹರು ಓಲೇಕಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಾಜಿ ಸಚಿವ ರುದ್ರಪ್ಪ ಲಮಾಣಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದರಿಂದಲೇ ಮಳೆ ಬಂದಾಗಲೆಲ್ಲ ಪ್ರವಾಸಿ ಮಂದಿರದ ಮುಂದೆ ನೀರು ನುಗ್ಗುತ್ತಿದೆ ಎಂದು ಆರೋಪಿಸಿದರು.
ಕಳೆದ ವರ್ಷ ಇದೇ ರೀತಿ ಮಳೆಯಾದಾಗ ಓರ್ವರು ಸಾವನ್ನಪ್ಪಿದ್ದರು. ಈಗಲಾದರೂ ರುದ್ರಪ್ಪ ಲಮಾಣಿ ಅವರು ಎಚ್ಚೆತ್ತು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳಾದರು ಕ್ರಮ ಕೈಗೊಳ್ಳಬೇಕು ಎಂದು ನೆಹರು ಓಲೇಕಾರ್ ಒತ್ತಾಯಿಸಿದರು.