ETV Bharat / state

ಕೋಟೆನಾಡಿನಲ್ಲಿ ಧಾರಾಕಾರ ಮಳೆ.. ಭರ್ತಿಯಾದ ಕೆರೆ-ಕಟ್ಟೆ, ಚೆಕ್ ಡ್ಯಾಂಗಳು.. - ವಾಣಿವಿಲಾಸ ಜಲಾಶಯ ಸುದ್ದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದೆ. (Rain in Chitradurga) ಜಿಲ್ಲೆಯ ಕೆರೆ ಕಟ್ಟೆಗಳು, ಚೆಕ್ ಡ್ಯಾಂಗಳು, ಕೃಷಿ ಹೊಂಡಗಳು, ನದಿಗಳು ಮೈದುಂಬಿ ಹರಿಯುತ್ತಿವೆ. ಐತಿಹಾಸಿಕ ಏಳುಸುತ್ತಿನ ಕೋಟೆಯಲ್ಲಿ (Chitradurga Fort) ನೀರು ಝರಿಯಂತೆ ಹರಿಯುತ್ತಿದೆ. ಇದರಿಂದ ಪ್ರವಾಸಿಗರ ಮನಸೆಳೆಯುತ್ತಿದೆ. ಜಿಲ್ಲೆಯ ಏಕೈಕ ಜೀವನಾಡಿ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ (Vani Vilasa Dam) ಶುಕ್ರವಾರ ರಾತ್ರಿ ದಾಖಲೆ ಮಟ್ಟದಲ್ಲಿ ನೀರು ಹರಿದು ಬಂದಿದೆ..

Rain in Chitradurga, Kellode check dam, Chitradurga Fort, ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಸುದ್ದಿ, ವಾಣಿವಿಲಾಸ ಜಲಾಶಯ ಸುದ್ದಿ, ಗಾಯಿತ್ರಿ ಜಲಾಶಯದ ಕೋಡಿ ಕುಸಿತ
ಭರ್ತಿಯಾದ ಕೆರೆ-ಕಟ್ಟೆ, ಚೆಕ್ ಡ್ಯಾಂ ಗಳು
author img

By

Published : Nov 20, 2021, 3:47 PM IST

ಚಿತ್ರದುರ್ಗ : ಮಧ್ಯಕರ್ನಾಟಕದ ಹೆಬ್ಬಾಗಿಲು ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದೆ. (Rain in Chitradurga) ಜಿಲ್ಲೆಯ ಕೆರೆ ಕಟ್ಟೆಗಳು, ಚೆಕ್ ಡ್ಯಾಂಗಳು, ಕೃಷಿ ಹೊಂಡಗಳು, ನದಿಗಳು ಮೈದುಂಬಿ ಹರಿಯುತ್ತಿವೆ.

ಐತಿಹಾಸಿಕ ಏಳುಸುತ್ತಿನ ಕೋಟೆಯಲ್ಲಿ (Chitradurga Fort) ನೀರು ಝರಿಯಂತೆ ಹರಿಯುತ್ತಿದೆ. ಪ್ರವಾಸಿಗರ ಮನಸೆಳೆಯುತ್ತಿದೆ. ಜಿಲ್ಲೆಯ ಪ್ರೇಕ್ಷಣೀಯ ಸ್ಥಳ ಏಳು ಸುತ್ತಿನ‌ ಕೋಟೆಯ ಒನಕೆ ಓಬವ್ವನ ಕಿಂಡಿಯಲ್ಲಿ ರಭಸವಾಗಿ ಬಂಡೆಗಳ ಮೇಲೆಲ್ಲಾ ನೀರು ಹರಿಯುತ್ತಿದೆ. ಕೋಟೆಯಲ್ಲಿರುವ‌ ಸಿಹಿ ನೀರು ಹೊಂಡ, ಗೋಪಾಲಸ್ವಾಮಿ ಹೊಂಡ ಸಂಪೂರ್ಣ ಭರ್ತಿಯಾಗಿವೆ.

ಭರ್ತಿಯಾದ ಕೆರೆ-ಕಟ್ಟೆ, ಚೆಕ್ ಡ್ಯಾಂಗಳು

ದಾಖಲೆ ಮಟ್ಟದ ನೀರು ಸಂಗ್ರಹ : ಜಿಲ್ಲೆಯ ಏಕೈಕ ಜೀವನಾಡಿ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ (Vani Vilasa Dam) ಶುಕ್ರವಾರ ರಾತ್ರಿ ದಾಖಲೆ ಮಟ್ಟದಲ್ಲಿ ನೀರು ಹರಿದು ಬಂದಿದೆ. 7860 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಇದರಿಂದ ಶುಕ್ರವಾರ ಒಂದೇ ದಿನ ಡ್ಯಾಂಗೆ 1 ಅಡಿ ನೀರು ಬಂದಿದೆ. ಇದರಿಂದ ಜಲಾಶಯದ ನೀರಿನ ಮಟ್ಟ ಇಂದು 120.20 ಅಡಿ ತಲುಪಿದೆ.

ಗಾಯಿತ್ರಿ ಜಲಾಶಯದ ಕೋಡಿ ಕುಸಿತ : ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಮೈದುಂಬಿ ಹರಿಯುತ್ತಿದೆ. 2017ರಲ್ಲಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಈ ಜಲಾಶಯದ ಕೋಡಿ ಎರಡು ಬಾರಿ ಬಿದ್ದಿತ್ತು. ಇದೀಗ 4 ವರ್ಷಗಳ ಬಳಿಕ ಮತ್ತೆ ಕೋಡಿ ಬಿದ್ದಿದೆ.

ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿ : ಚಿಕ್ಕಮಗಳೂರು ಹಾಗೂ ಕಡೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಹೊಸದುರ್ಗ ತಾಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ (Kellode check dam) ಉಕ್ಕಿ ಹರಿಯುತ್ತಿದೆ. ಕಾರೆಹಳ್ಳಿ ಮೂಲಕ ಬೇವಿನಹಳ್ಳಿ ಮಾರ್ಗವಾಗಿ ನೀರು ವೇದಾವತಿ ನದಿ ಸೇರಿ ಅಲ್ಲಿಂದ ವಿವಿ ಸಾಗರಕ್ಕೆ ಹರಿದು ಬರುತ್ತಿದೆ. ಹೊಸದುರ್ಗ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇದರಿಂದಾಗಿ ನೀರಿನ ಬವಣೆಯ ಆತಂಕ ದೂರವಾಗಿದೆ.

ಉಕ್ಕಿ ಹರಿಯುತ್ತಿರುವ ನದಿಗಳು : ಒಂದು ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆಗೆ ಜಿಲ್ಲೆಯ ವೇದಾವತಿ ನದಿ ಹಾಗೂ ಸುವರ್ಣಮುಖಿ ಎರಡು ನದಿಗಳು ಅರ್ಧದಷ್ಟು ಮೈದುಂಬಿ ಹರಿಯುತ್ತಿವೆ. ವೇದಾವತಿ ನದಿ ಹಾಗೂ ಸುವರ್ಣಮುಖಿ ಎರಡು ನದಿಗಳು ತಾಲೂಕಿನ ಕೂಡ್ಲಹಳ್ಳಿ ಬಳಿ ಸಂಗಮವಾಗಿ ನಂತರ ಅಲ್ಲಿಂದ ಚಳ್ಳಕೆರೆ, ಮೊಳಕಾಲ್ಮೂರು ಮೂಲಕ ಆಂಧ್ರಪ್ರದೇಶದ ಕಡೆ ನೀರು ಹರಿಯುತ್ತಿದೆ. ಜಿಲ್ಲೆಯ ನೀರು ಇಲ್ಲಿಂದ ಬಂಗಾಳ ಕೊಲ್ಲಿ (Bay of Bengal) ಸೇರುತ್ತದೆ.

ಜಿಲ್ಲೆಯಲ್ಲಿ ಕೆರೆಗಳು ಭರ್ತಿ : ಸಣ್ಣ ನೀರಾವರಿ ಇಲಾಖೆ ಸೇರಿದ 166 ಕೆರೆಗಳಲ್ಲಿ ಈಗಾಗಲೇ 20 ಕೆರೆಗಳು ಭರ್ತಿಯಾಗಿವೆ. ಇನ್ನೂ ಕೆಲವು ಕೆರೆಗಳು ತುಂಬುವ ಹಂತಕ್ಕೆ ತಲುಪಿವೆ. ಹೊಳಲ್ಕೆರೆ, ಚಿತ್ರದುರ್ಗ, ಹೊಸದುರ್ಗ ಹಾಗೂ ಚಳ್ಳಕೆರೆ, ಮೊಳಕಾಲ್ಮೂರು ಭಾಗದಲ್ಲಿ ವರುಣನ ಆರ್ಭಟಕ್ಕೆ ಕೃಷಿ ಹೊಂಡಗಳು, ಚೆಕ್ ಡ್ಯಾಂಗಳು, ಸಣ್ಣ ಪುಟ್ಟ ಹಳ್ಳಕೊಳ್ಳಗಳು ತುಂಬಿವೆ.

ಓದಿ: ಚಿಕ್ಕಮಗಳೂರು : ಹಳ್ಳದಲ್ಲಿ ಕೊಚ್ಚಿ ಹೋದ ಸ್ಕೂಟರ್​ ಸವಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.