ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಠಾಣೆ ಪಿಎಸ್ಐ ಸೇರಿದಂತೆ ಒಂಬತ್ತು ಜನ ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಹೋಂ ಕ್ವಾರಂಟೈನ್ ಶಿಕ್ಷೆ ವಿಧಿಸಲಾಗಿದೆ.
ಭರಮಸಾಗರ ಠಾಣೆಯ ವ್ಯಾಪ್ತಿಯ ಗ್ರಾಮಯೊಂದರ ಯುವತಿ ದೂರು ನೀಡಿದ್ದ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿದ್ದರು. ದೂರುದಾರ ಯುವತಿ ಮೇಲೆ ಮಹಾರಾಷ್ಟ್ರಕ್ಕೆ ಹೋಗಿ ಭರಮಸಾಗರಕ್ಕೆ ಹಿಂದುರಿಗಿದ್ದ ವ್ಯಕ್ತಿ ಅತ್ಯಾಚಾರ ಎಸಗಿರುವುದಾಗಿ ಆರೋಪ ಮಾಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ಭರಮಸಾಗರ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ಬಳಿಕ ದೂರುದಾರ ಯುವತಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 10ರಂದು ಬೆಂಗಳೂರಿನಲ್ಲಿ ದೂರದಾರ ಯುವತಿಗೆ ಕೊರೊನಾ ಸೋಂಕು ದೃಢವಾಗಿದೆ. ಬೆಂಗಳೂರಿಗೆ ತೆರಳುವ ಮುನ್ನ ಚಿತ್ರದುರ್ಗದಲ್ಲಿ ಯುವತಿಗೆ ಚಿಕಿತ್ಸೆ ನೀಡಿದ್ದ ಜಿಲ್ಲೆಯ ಇಬ್ಬರು ವೈದ್ಯರನ್ನ ಹೋಂ ಕ್ವಾರಂಟೈನ್ನಲ್ಲಿರಿಸಲಾಗಿದೆ.
ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಜೂನ್ 4ರಂದು ಚಿತ್ರದುರ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಹಿನ್ನಲೆ ಇದೀಗ ಆರೋಗ್ಯ ಇಲಾಖೆ ಮಹಿಳೆಯ ಟ್ರ್ಯಾವಲ್ ಹಿಸ್ಟರಿ ಕಲೆ ಹಾಕುತ್ತಿದೆ.