ಚಿತ್ರದುರ್ಗ : ಎಲ್ಲೆಡೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರ ಪಿಎಸ್ಐ ಮಂಜುನಾಥ್ ಅರ್ಜುನ್ ಲಿಂಗರೆಡ್ಡಿ, ಆಮ್ಲಜನಕದ ಕೊರತೆ ಉಂಟಾಗದಂತೆ ತಡೆಯಲು ಚಳ್ಳಕೆರೆ ನಗರದಲ್ಲಿನ ಬೇರೆ ಬೇರೆ ಗ್ಯಾರೇಜ್ಗಳಲ್ಲಿದ್ದ 20 ಸಿಲಿಂಡರ್ಗಳನ್ನು ಸಂಗ್ರಹಿಸಿ ಆಸ್ಪತ್ರೆಗೆ ನೀಡಿದ್ದಾರೆ.
ಆಕ್ಸಿಜನ್ ಕೊರತೆಯಿಂದ ಸಾಕಷ್ಟು ರೋಗಿಗಳು ತಮ್ಮ ಉಸಿರು ನಿಲ್ಲಿಸುತ್ತಿದ್ದಾರೆ. ಗ್ಯಾಸ್ ಪ್ಲಾಂಟ್ಗಳಲ್ಲಿ ಆಕ್ಸಿಜನ್ ಇದ್ದರೂ ತುಂಬಿಸಲು ಸಿಲಿಂಡರ್ಗಳ ಕೊರತೆಯಿದೆ.
ಹೀಗಾಗಿ, ಸೋಂಕಿತರಿಗೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಗ್ಯಾರೇಜ್ ಮಾಲೀಕರಾದ ಖಲೀಂ ಉಲ್ಲಾ, ರಂಗಸ್ವಾಮಿ, ಆನಿಪ್ ಮಂಜುನಾಥ್ ಇವರುಗಳಲ್ಲಿದ್ದ ಸಿಲಿಂಡರ್ಗಳನ್ನು ಆಸ್ಪತ್ರೆಗೆ ನೀಡಿದ್ದಾರೆ.
ಮಾಲೀಕರ ಬಳಿ ಮಾತಾನಾಡಿ ಸಿಲಿಂಡರ್ಗಳನ್ನು ಕೊಡಿಸಿದ್ದೇನೆ. ಇನ್ನೂ ಎಲ್ಲಾದರೂ ಹೆಚ್ಚುವರಿ ಸಿಲಿಂಡರ್ಗಳು ಇದ್ದಲಿ ಗಮನಕ್ಕೆ ತನ್ನಿ. ರೋಗಿಗಳ ಜೀವ ಉಳಿಸುವುದು ನಮ್ಮಲ್ಲರ ಕರ್ತವ್ಯ ಎಂದು ಪಿಎಸ್ಐ ಮಂಜುನಾಥ್ ತಿಳಿಸಿದ್ದಾರೆ.