ಚಿತ್ರದುರ್ಗ: ದೀಪಾವಳಿ, ದಸರಾ, ಯುಗಾದಿಗೆ ಸರ್ಕಾರ ಉರುಳುತ್ತೆ ಎಂದಿದ್ರು, ಅದ್ರೇ ಸರ್ಕಾರ ಎಲ್ಲಿ ಬಿತ್ತು ಎಂದು ಬಿಜೆಪಿಯವರಿಗೆ ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಪ್ರಶ್ನಿಸಿದರು.
ಚಿತ್ರದುರ್ಗದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಆನಂದ್‌ಸಿಂಗ್ ಹಾಗೂ ಶಾಸಕ ರಮೇಶ್ ಜಾರಕಿಹೋಳಿ ರಾಜೀನಾಮೆ ನೀಡಿರುವುದರ ಬಗ್ಗೆ ಗೊತ್ತೇ ಇಲ್ಲ. ನಾನು ತುಮಕೂರು, ಚಿತ್ರದುರ್ಗ , ದಾವಣಗೆರೆ ಪ್ರವಾಸದಲ್ಲಿ ಇರುವ ಕಾರಣ ನನಗೆ ಮಾಹಿತಿ ಲಭ್ಯವಾಗಿಲ್ಲ. ರಮೇಶ್ ಜಾರಕಿ ಹೋಳಿ ಒಳ್ಳೆಯ ಸ್ನೇಹಿತರು. ಅವರು ರಾಜೀನಾಮೆ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅದ್ರೆ ಸರ್ಕಾರ ಮಾತ್ರ ಅದರ ಪಾಡಿಗೆ ಅದು ನಡೆಯುತ್ತಿದೆ ಎಂದರು.
ಇನ್ನು ಆಡಳಿತದಲ್ಲಿ ಬೇರೆ ಸಮಸ್ಯೆ ಎದುರಾಗುವುದು ಸರ್ವೇ ಸಾಮಾನ್ಯ. ಅಷ್ಟಕ್ಕೆ ಸರ್ಕಾರ ಬೀಳುತ್ತೆ ಎಂದ್ರೆ ಏನ್ ಅರ್ಥ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಸರ್ಕಾರದಲ್ಲಿ ಅತೃಪ್ತರಿಗೆ ಖಾತೆ ನೀಡಿದ್ರೆ ರಾಜೀನಾಮೆ ನೀಡ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನ ಕಿತ್ತುಕೊಂಡು ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ರೆ ಅ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ನಾನೇ ಇರಲಿ, ಯಾರೇ ಇರಲಿ ಎಲ್ಲರೂ ಪಕ್ಷದ ನಿರ್ಧಾರಕ್ಕೆ ತಲೆಬಾಗುತ್ತೇವೆ ಎಂದರು.