ETV Bharat / state

ಬಿಸಿಎಂ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​​​​​​​​ಗೆ ಸಿದ್ಧತೆ: ಸ್ಥಳೀಯರಿಂದ ಭಾರಿ ವಿರೋಧ

author img

By

Published : May 11, 2020, 3:25 PM IST

ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ನಲ್ಲಿರುವ ಬಿಸಿಎಂ ಹಾಸ್ಟೆಲ್​ನಲ್ಲಿ ಹೊರ ರಾಜ್ಯದಿಂದ ಬಂದವರಿಗಾಗಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದ್ದು, ಕೊರೊನಾ ಹರಡುವ ಭೀತಿಯಿಂದ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

Opposition from locals
ಕ್ವಾರಂಟೈನ್​ಗೆ ಸಿದ್ದತೆ ಮಾಡಿದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಚಿತ್ರದುರ್ಗ: ರಾಜ್ಯದ ವಿವಿಧೆಡೆಗಳಿಂದ ಬಂದವರಿಗೆ ನಗರದ ಬಿಸಿಎಂ ಹಾಸ್ಟೆಲ್​​​​​​ನಲ್ಲಿ ಕ್ವಾರಂಟೈನ್​​​​ಗೆ ಸಿದ್ಧತೆ ನಡೆಸಿದಿರುವುದನ್ನು ಮನಗಂಡ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಕ್ವಾರಂಟೈನ್​ಗೆ ಸಿದ್ಧತೆ ಮಾಡಿದ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಚಳ್ಳಕೆರೆ ಗೇಟ್ ಬಳಿಯ ನಿವಾಸಿಗಳಿಂದ ಕ್ವಾರಂಟೈನ್​ಗೆ ವಿರೋಧ ವ್ಯಕ್ತವಾಗಿದ್ದು, ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ನಲ್ಲಿರುವ ಬಿಸಿಎಂ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​ ಮಾಡದೇ, ನಗರದ ಹೊರವಲಯದ ಕಟ್ಟಡಗಳಲ್ಲಿ ಈ ಸಿದ್ಧತೆ ಮಾಡಲು ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಬಿಸಿಎಂ ಹಾಸ್ಟೆಲ್ ನ ಡ್ರೈನೇಜ್ ನೀರು ರಸ್ತೆ ಮೇಲೆ ಹರಿಯುವ ಹಿನ್ನೆಲೆ, ಈ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಿದರೆ ಕೊರೊನ ಸೋಂಕು ಬಹು ಬೇಗ ಬಡಾವಣೆಯಲ್ಲಿ ಹರಡುವ ಭೀತಿಯಿಂದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.

ಹಾಸ್ಟೆಲ್​​​​ನಲ್ಲಿ ಕ್ವಾರಂಟೈನ್ ಮಾಡಲು ತಡರಾತ್ರಿ ಆಗಮಿಸಿದ ಪೊಲೀಸರು, ಅಧಿಕಾರಿಗಳ‌ ಜತೆ ಸ್ಥಳೀಯರು ವಾಗ್ವಾದಕ್ಕಿಳಿದು ವಿರೋಧ ವ್ಯಕ್ತಪಡಿಸುವ ಮೂಲಕ ಕ್ವಾರಂಟೈನ್ ಸಿದ್ಧತೆಗಳನ್ನು ತಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.