ETV Bharat / state

ರಾಜಕಾರಣಿಯಾಗಿ ಸಿಎಂ ಆಗುವ ಆಕಾಂಕ್ಷೆ ತಪ್ಪಲ್ಲ, ನಾನು ಸಿದ್ದರಾಮಯ್ಯಗೆ ಕಾಂಪಿಟೇಟರ್ ಅಲ್ಲ:  ಮತ್ತೆ ದೇಶಪಾಂಡೆ ಸ್ಪಷ್ಟನೆ - R V Deshpande - R V DESHPANDE

ನಾನು ಸಿದ್ದರಾಮಯ್ಯಗೆ ಕಾಂಪಿಟೇಟರ್ ಅಲ್ಲ, ಐದು ವರ್ಷವೂ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

deshpande
ಆರ್.ವಿ.ದೇಶಪಾಂಡೆ (IANS)
author img

By ETV Bharat Karnataka Team

Published : Sep 26, 2024, 10:53 PM IST

ಬೆಂಗಳೂರು: ''ರಾಜಕಾರಣಿಯಾಗಿ ಸಿಎಂ ಆಗುವ ಆಕಾಂಕ್ಷೆ ಇರೋದು ತಪ್ಪಲ್ಲ. ನಾನು ಸಿದ್ದರಾಮಯ್ಯಗೆ ಕಾಂಪಿಟೇಟರ್ ಅಲ್ಲ'' ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ‌ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ''ಪಕ್ಷದೊಳಗೆ ಶಿಸ್ತುಬದ್ಧವಾಗಿರಬೇಕು. ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ. ಡಿಕೆಶಿ ಸಹ ಡಿಸಿಎಂ ಇದ್ದಾರೆ, ಕೆಪಿಸಿಸಿ ಅಧ್ಯಕ್ಷರಿದ್ದಾರೆ. ಅವರು ಸಿಎಂ ಆಗುವ ಗುರಿ ಇಟ್ಟುಕೊಂಡಿದ್ದರೆ ತಪ್ಪಲ್ಲ ಎಂದು ಹೇಳಿದರು.

''ಸಿದ್ದರಾಮಯ್ಯನವರ ವಿರುದ್ದ ಅನಾವಶ್ಯಕವಾದ ಚರ್ಚೆ ನಡೆಯುತ್ತಿದೆ. ನನ್ನ, ಸಿದ್ದರಾಮಯ್ಯನವರ ಪರಿಚಯ ನಾಲ್ಕು ದಶಕದ್ದು. ಸಿದ್ದರಾಮಯ್ಯ ಚಾರಿತ್ರ್ಯ, ಅವರ ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ. ಅವರು ಯಾವುದೇ ಹಣ ದುರುಪಯೋಗ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಮುಡಾದಲ್ಲಿ 14 ಸೈಟ್ ಅವರ ಧರ್ಮಪತ್ನಿ ಹೆಸರಲ್ಲಿ ಮಂಜೂರಾಗಿದೆ. ಇದು ಅನಾವಶ್ಯಕ ವಾದ. ಆಗ ಯಾರ ಸರ್ಕಾರ ಅಧಿಕಾರದಲ್ಲಿ ಇದ್ದಿದ್ದು.?. ಬಿಜೆಪಿ ಸರ್ಕಾರ ಇತ್ತಲ್ಲ. ಅವರಿಗೆ ನೈತಿಕತೆ ಇದೆಯಾ?. ಮುಡಾದವರೇ ನಿರ್ಣಯಿಸಿ ಸೈಟ್ ಕೊಟ್ಟಿದ್ದಾರೆ'' ಎಂದರು.

''ಸಿದ್ದರಾಮಯ್ಯ ಹೋಗಿ ಸೈಟ್ ಕೊಡಿ ಅಂತಾ ಕೇಳಿದ್ರಾ?. ಸಿದ್ದರಾಮಯ್ಯನವರನ್ನು ಪ್ರಶ್ನೆ ಮಾಡುವುದು ಎಷ್ಟು ಸರಿ?. ರಾಜಕೀಯವಾಗಿ ಸಿದ್ದರಾಮಯ್ಯರನ್ನು ಎದುರಿಸುವ ಶಕ್ತಿ ಅವರಿಗಿಲ್ಲ.‌ ಕೋರ್ಟ್ ತನಿಖೆಗೆ ಆದೇಶ ಮಾಡಿದೆ. ಸಿದ್ದರಾಮಯ್ಯನವರೂ ತನಿಖೆ ಮಾಡಲಿ ಎಂದಿದ್ದಾರೆ. ಸಿಎಂ ಹೈಕೋರ್ಟ್​ಗೆ ಅಪೀಲು ಹೋಗಬಹುದು ಅಥವಾ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದು. ಬೇಜವಾಬ್ದಾರಿತನದಿಂದ ಸಿಎಂ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ನಾವು ಬಿಜೆಪಿಯನ್ನು ನಿಂದಿಸಲು ಹೋಗಲ್ಲ, ಅದರಿಂದ ಏನು ಉಪಯೋಗ?'' ಎಂದು ಪ್ರಶ್ನಿಸಿದರು.

''ಅನಾವಶ್ಯಕವಾಗಿ ಸತ್ಯಕ್ಕೆ ದೂರದ ಮಾತುಗಳನ್ನಾಡುತ್ತಿದ್ದಾರೆ. ನೀವು ಅಧಿಕಾರದಲ್ಲಿದ್ದು, ಸೈಟ್ ಹಂಚಿಕೆ ಮಾಡಿರೋದು ನಿಮ್ಮ ತಪ್ಪಲ್ವಾ?. ನೀವು ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷವೂ ಇರ್ತಾರೆ. ಅವರಿಗೆ ಹೈಕಮಾಂಡ್, ಮಂತ್ರಿಮಂಡಲದ ಸಂಪೂರ್ಣ ಬೆಂಬಲ ಇದೆ. ಎಫ್​ಐಆರ್ ಆದ ಮೇಲೆ ಸೆಕ್ಷನ್ ಏನಿರುತ್ತೋ ನೋಡಬೇಕು. ಜಾಮೀನು ಪಡೆದುಕೊಂಡ ಮಾತ್ರಕ್ಕೆ ರಾಜೀನಾಮೆ ಕೊಡಬೇಕು ಅಂತೇನಿಲ್ಲ. ಸಿದ್ದರಾಮಯ್ಯ ಪ್ರಾಮಾಣಿಕ, ಕಳಂಕ ರಹಿತ ವ್ಯಕ್ತಿ'' ಎಂದರು.

''ಮೋದಿ ಅವರು ದುರ್ಲಾಭ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿರುವುದನ್ನು ಸಹಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ ಪವರ್​​ಫುಲ್ ಆಗಿ ಬೆಳೆಯುತ್ತಿದ್ದಾರೆ. ಸರ್ಕಾರ ಬೀಳಿಸುವ ರೀತಿಯ ಕ್ರಮ ತೆಗೆದುಕೊಳ್ಳಿ ಅಂತಾ ಗವರ್ನರ್​​ಗೆ ಕೇಂದ್ರದಿಂದ ಗೌಪ್ಯ ಆದೇಶ ಬಂದಿದೆ. ರಾಜ್ಯಪಾಲರಿಗೆ ಮನಸ್ಸಿಲ್ಲ. ಆದರೂ ಹೀಗೆ ಮಾಡುತ್ತಿದ್ದಾರೆ'' ಎಂದು ದೇಶಪಾಂಡೆ ಆರೋಪಿಸಿದರು.

ಇದನ್ನೂ ಓದಿ: ನಗರ ಪೊಲೀಸ್ ಕಮಿಷನರ್​ಗೆ ಸ್ನೇಹಮಯಿ ಕೃಷ್ಣ ದೂರು : ಕಾರಣವೇನು ? - Snehamayi Krishna filed a complaint

ETV Bharat Logo

Copyright © 2025 Ushodaya Enterprises Pvt. Ltd., All Rights Reserved.