ಚಿತ್ರದುರ್ಗ: ಕೋಟೆನಾಡಿನಲ್ಲಿ ನಿಗದಿಯಾಗಿದ್ದ ಪ್ರಧಾನಿ ಮೋದಿ ಅವರ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮ ದಿಢೀರ್ ಮುಂದೂಡಿಕೆಯಾಗಿದೆ.
ಏಪ್ರಿಲ್ 08 ಕ್ಕೆ ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಏಪ್ರಿಲ್ 09 ಕ್ಕೆ ನಿಗದಿ ಪಡಿಸಲಾಗಿದೆ.
ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಮೋದಿ ಕೋಟೆನಾಡಿಗೆ ಲಗ್ಗೆ ಇಡುವ ಮೂಲಕ ಕಮಲ ಅಭ್ಯರ್ಥಿ ಎ ನಾರಾಯಣ ಸ್ವಾಮಿ ಪರ ಮತದಾರ ಪ್ರಭುವಿನಲ್ಲಿ ಮತಬೇಟೆಯಾಡಲಿದ್ದಾರೆ. ಈ ಕಾರ್ಯಕ್ರಮವಾದ ಬಳಿಕ ಪ್ರಧಾನಿ ಮೋದಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಯಾಣ ಬೆಳೆಸಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.