ಚಿತ್ರದುರ್ಗ: ನಗರ ಬಳಿಯ ಮುರುಘಾಮಠದಲ್ಲಿ ವಿಚಿತ್ರ ಬಗೆಯ ಕಳ್ಳತನ ನಡೆದಿರುವುದು ವರದಿಯಾಗಿದೆ. ಮಠದ ರಾಜಾಂಗಣದ ಗೋಡೆಗೆ ಹಾಕಿದ್ದ 47 ಫೋಟೋಗಳನ್ನು ಕದ್ದೊಯ್ಯಲಾಗಿದೆ. ವಿವಿಧ ಗಣ್ಯರ ಜೊತೆ ಮುರುಘಾ ಶರಣರು ಇರುವ ಫೋಟೋಗಳು ಇಲ್ಲಿದ್ದವು. ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ, ಸಿಎಂಗಳ ಜತೆಗಿನ ಫೋಟೋಗಳಿದ್ದವು.
ಈ ಫೋಟೋಗಳನ್ನು ಇಬ್ಬರು ಕಳ್ಳತನದ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಕ್ಟೋಬರ್ 5ರ ಮಧ್ಯರಾತ್ರಿ ವೇಳೆ ಫೋಟೋಗಳ ಕಳ್ಳತನ ನಡೆದಿದೆ. ನಿನ್ನೆ ರಾತ್ರಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ವಾಹನವೊಂದರಲ್ಲಿ ಫೋಟೋಗಳನ್ನು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ.
ಮುರುಘಾ ಶರಣರು ಫೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಸಂದರ್ಭದಲ್ಲಿ ನಡೆದಿರುವ ಈ ವಿಚಿತ್ರ ಬಗೆಯ ಕಳವು ಎಲ್ಲರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ : ಮುರುಘಾ ಮಠ, ಶಿಕ್ಷಣ ಸಂಸ್ಥೆಯಲ್ಲಿ ಹೇಗೆ ಸಂಬಳ ನೀಡಲಾಗುತ್ತಿತ್ತು?: ಮಾಹಿತಿ ನೀಡಲು ಹೈಕೋರ್ಟ್ ಸೂಚನೆ