ETV Bharat / state

ಹೊರ ರಾಜ್ಯಗಳಿಂದ ದುರ್ಗಕ್ಕೆ ಸಲೀಸಾಗಿ ಎಂಟ್ರಿ : ಕಣ್ಮುಚ್ಚಿ ಕುಳಿತ‌ ಪೊಲೀಸ್ ಇಲಾಖೆ - ಹೊರ ರಾಜ್ಯಗಳಿಂದ ಚಿತ್ರದುರ್ಗಕ್ಕೆ ಬರುವ ಜನರು

ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚಳ್ಳಕೆರೆ ತಾಲೂಕಿನ ಮಾರ್ಗವಾಗಿ ಬೇರೆ ರಾಜ್ಯದ ಜನರು ಕೋಟೆ ನಾಡಿಗೆ ಆಗಮಿಸುತ್ತಿರುವುದು ಸ್ಥಳೀಯರಲ್ಲಿ ಕೊರೊನಾ ಭೀತಿ ಹೆಚ್ಚಿಸುವಂತೆ ಮಾಡಿದೆ.

Chitradurga
ಚಿತ್ರದುರ್ಗದ ಗಡಿಯಲ್ಲಿ ಬರುತ್ತಿರುವ ಜನರು
author img

By

Published : May 30, 2020, 6:19 PM IST

ಚಿತ್ರದುರ್ಗ: ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಸಲೀಸಾಗಿ ಚಿತ್ರದುರ್ಗ ಜಿಲ್ಲೆಗೆ ಜನರು ಆಗಮಿಸುತ್ತಿದ್ದು, ಪೊಲೀಸ್​ ಇಲಾಖೆ ಇವರನ್ನು ಯಾವುದೇ ತಪಾಸಣೆಗೊಳಪಡಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ, ನಾಗಪ್ಪನಹಳ್ಳಿ, ಪುಟ್ಲಾರಹಳ್ಳಿ, ಜಾಜೂರು ಬಳಿ ಕಾಲು ದಾರಿಗಳಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತಲೇ ಇವೆ. ಆದರೆ, ಪೊಲೀಸರು ಮಾತ್ರ ಇದನ್ನು ನೋಡಿಯೂ ನೋಡದಂತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಗಿದೆ.

ಚಿತ್ರದುರ್ಗದ ಗಡಿಯಲ್ಲಿ ಬರುತ್ತಿರುವ ಜನರು

ಪೊಲೀಸರ ಕಣ್ಣು ತಪ್ಪಿಸಿ ನಿರ್ಭಯವಾಗಿ ಓಡಾಡುತ್ತಿರುವ ಹೊರ ರಾಜ್ಯಗಳ ಜನರ ಓಡಾಟದಿಂದ ಕೋಟೆನಾಡಿನ ಜನರಲ್ಲಿ ಕೊರೊನಾ ಸೋಂಕು ಹರಡುವ ಆತಂಕ ಹೆಚ್ಚಳವಾಗಿದೆ.

ಇಷ್ಟು ದಿನಗಳ ಕಾಲ ಅಕ್ರಮ ಪ್ರವೇಶ ತಡೆಯಲು ಪರಶುರಾಂಪುರ ಠಾಣೆ ಪೊಲೀಸರು ಹರಸಾಹಸ ಪಡುತ್ತಿದ್ದರು, ಆದರೆ ಜನರನ್ನು ನಿಯಂತ್ರಿಸಲಾಗದೇ ಕೈಚೆಲ್ಲಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.