ETV Bharat / state

2.5 ಲಕ್ಷ ರೂ ಮೌಲ್ಯದ ಮಾಂಗಲ್ಯಸರ, 2 ಮೊಬೈಲ್‌, ಹಣವಿದ್ದ ಬ್ಯಾಗ್‌ ಮರಳಿಸಿದ ಆಟೋ ಚಾಲಕ - ಚಿತ್ರದುರ್ಗ ಸುದ್ದಿ

ನಗರದ ಹರಿಪ್ರಿಯ ಎಂಬುವವರು ಜೂನ್ 29ರ ಸಂಜೆ 5 ಗಂಟೆಯ ಸಮಯದಲ್ಲಿ ಚಂದ್ರವಳ್ಳಿಯಿಂದ ಆಟೋದಲ್ಲಿ ಮನೆಗೆ ತೆರಳಿದ್ದಾರೆ. ಆಟೋ ಇಳಿಯುವ ಆತುರದಲ್ಲಿ ಅವರು ತಮ್ಮ ಬ್ಯಾಗ್‌ ಬಿಟ್ಟುಹೋಗಿದ್ದರು.

passenger-bag-handed-over-police-by-auto-driver
ಪ್ರಯಾಣಿಕರು ಮರೆತು ಹೋಗಿದ್ದ ಬ್ಯಾಗ್ ಪೊಲೀಸರಿಗೆ ಒಪ್ಪಿಸಿದ ಆಟೋ ಚಾಲಕ
author img

By

Published : Jul 7, 2021, 10:14 PM IST

ಚಿತ್ರದುರ್ಗ: ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಬ್ಯಾಗ್​ವೊಂದನ್ನು ಪೊಲೀಸರಿಗೆ ಮರಳಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಆಟೋ ಡ್ರೈವರ್ ಸೈಯದ್, ಮಹಿಳೆಯೊಬ್ಬರು ಬಿಟ್ಟುಹೋಗಿದ್ದ 2 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಹಾಗೂ 2 ಮೊಬೈಲ್ ಇದ್ದ ಬ್ಯಾಗ್​ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಗರದ ಹರಿಪ್ರಿಯ ಎಂಬುವವರು ಜೂನ್ 29ರ ಸಂಜೆ 5 ಗಂಟೆ ಸಮಯದಲ್ಲಿ ಚಂದ್ರವಳ್ಳಿಯಿಂದ ಆಟೋದಲ್ಲಿ ಮನೆಗೆ ತೆರಳಿದ್ದಾರೆ. ಆದ್ರೆ ಆಟೋ ಇಳಿಯುವ ಗಡಿಬಿಡಿಯಲ್ಲಿ ತಮ್ಮ ಬ್ಯಾಗ್ ಅನ್ನು ಆಟೋದಲ್ಲೇ ಬಿಟ್ಟು ಹೋಗಿದ್ದರು. ಕೆಲ ಸಮಯದ ನಂತರ ಆಟೋ ಚಾಲಕ ಆ ಬ್ಯಾಗ್ ಅನ್ನು ಗಮನಿಸಿದಾಗ ಅದರಲ್ಲಿ 2 ಲಕ್ಷ 50 ಸಾವಿರ ಮೌಲ್ಯದ ಮಾಂಗಲ್ಯಸರ, ಎರಡು ಮೊಬೈಲ್ ಹಾಗು ಹಣ ಇರುವುದು ಗೊತ್ತಾಗಿದೆ.

ಬಳಿಕ ಸೈಯದ್​ ಆ ಬ್ಯಾಗ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಬ್ಯಾಗ್ ವಾರಸುದಾರರನ್ನು ಪತ್ತೆ ಹಚ್ಚಿ ಹಿಂದಿರುಗಿಸಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಜ್ಯುವೆಲ್ಲರಿ ಶಾಪ್​ ಮಾಲೀಕನಿಗೆ 64 ಲಕ್ಷ ರೂ. ದಂಡ ವಿಧಿಸಿದ ಅಧಿಕಾರಿಗಳು: ಯಾಕೆ ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.