ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಚಲಾಯಿಸಿ ಮನೆಗೆ ಬಂದ ವೃದ್ಧೆಯೊಬ್ಬರು ಕೊನೆಯುಸಿರೆಳೆದ ಘಟನೆ ಹಿರಿಯೂರು ತಾಲೂಕಿನ ಬಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿರೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿ ಮನೆಗೆ ಬರುತ್ತಿದ್ದಂತೆ ವೃದ್ಧೆ ಸರೋಜಮ್ಮ (92) ಮೃತಪಟ್ಟಿದ್ದಾರೆ.
ಓದಿ: ನೋಟಿನ ಕಂತೆ ಹಿಡಿದು ಪ್ರಚಾರಕ್ಕೆ ಮುಂದಾದ ಅಭ್ಯರ್ಥಿಗಳು: ವಿಡಿಯೋ
ಸಾಯಂಕಾಲದ ಸಮಯದಲ್ಲಿ ಸರೋಜಮ್ಮ ತನ್ನ ಮೊಮ್ಮಗನ ಜೊತೆಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದರು.