ಚಿತ್ರದುರ್ಗ: ಕುಡಿಯುವ ನೀರು ಹಾಗೂ ಬೋರ್ವೆಲ್ಗಳ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸಚಿವ ವೆಂಕಟರಮಣಪ್ಪ ಕೆಂಡಾಮಂಡಲರಾಗಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಬರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೆಲಸ ಮಾಡದೆ ಇರುವ ಅಧಿಕಾರಿಗಳನ್ನು ನೇಣಿಗೆ ಹಾಕಬೇಕು. ಕಾರ್ಯನಿರ್ವಹಿಸಿ ಸರಿಯಾದ ವರದಿಯನ್ನು ಸಲ್ಲಿಸದೆ ಇರುವ ಅಧಿಕಾರಿಗಳಿಗೆ ಬರೆ ಎಳೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಚಿವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇಗೆ ಹಾಗೂ ಚಳ್ಳಕೆರೆ ಎಇಇ ಭೀಮಾ ನಾಯಕ್ಗೆ ತರಾಟೆ ತೆಗೆದುಕೊಂಡರು. ಇನ್ನು ಕುಡಿಯುವ ನೀರು ಹಾಗೂ ಬೋರ್ವೆಲ್ಗಳ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ತಾಕೀತು ಮಾಡಿದರು.