ಚಿತ್ರದುರ್ಗ: ಎಪಿಎಂಸಿ ತೆರಿಗೆ ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ಸೆಸ್ ರದ್ದುಗೊಳಿಸಿ, ಏಕರೂಪ ನೀತಿ ಅನುಸರಿಸುವಂತೆ ಅಡಕೆ ವರ್ತಕರ ಸಂಘ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವರ್ತಕರ ಸಂಘದ ಪದಾಧಿಕಾರಿಗಳು, ರಾಜ್ಯ ಸರ್ಕಾರದ ಅಧಿನದಲ್ಲಿರುವ ಎಪಿಎಂಸಿ ಕಾಯ್ದೆ ಪ್ರಕಾರ ಶೇ.1.5ರಷ್ಟು ತೆರಿಗೆ ವಿಧಿಸಲಾಗಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ತೆರಿಗೆಯನ್ನೂ ಪಾವತಿಸುತ್ತಿದ್ದೇವೆ. ಒಂದು ದೇಶ ಒಂದು ತೆರಿಗೆ ಅಡಿ ಶೇ.1ರಷ್ಟು ಜಿಎಸ್ಟಿ ಕಟ್ಟುತ್ತಿದ್ದೇವೆ ಎಂದರು.
ಆದರೆ, ಎಪಿಎಂಸಿಯಲ್ಲಿ ಅಡಕೆ ಖರೀದಿ ಮಾಡುವವರಿಗೆ ಮಾತ್ರ ಸೆಸ್ ಅನ್ವಯವಾಗುತ್ತಿದ್ದು, ಇತ್ತ ಎಪಿಎಂಸಿ ಹೊರಗೆ ಅಡಕೆ ಖರೀದಿ ಮಾಡುವವರಿಗೆ ಸೆಸ್ ಅನ್ವಯವಾಗುತ್ತಿಲ್ಲ. ಇದರಿಂದ ರೈತರು ಸೇರಿದಂತೆ ವರ್ತಕರಿಗೆ ಅನ್ಯಾಯ ಆಗುತ್ತಿದೆ. ಏಕರೂಪ ನೀತಿ ಪ್ರಕಾರ ಎಪಿಎಂಸಿ ಸೆಸ್ ರದ್ದು ಪಡಿಸಬೇಕೆಂದು ವರ್ತಕರು ಒತ್ತಾಯಿಸಿದರು.
ಸೆಸ್ ರದ್ದುಗೊಳ್ಳುವ ತನಕ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ, ಶಿರಸಿ, ಶಿವಮೊಗ್ಗ, ಚನ್ನಗಿರಿ, ಸಾಗರ, ಯಲ್ಲಾಪುರ, ಮಂಗಳೂರು ಭಾಗದಲ್ಲಿ ಅಡಕೆ ವ್ಯಾಪಾರ ಸ್ಥಗಿತಗೊಳಿಸಲು ಸಂಘ ತೀರ್ಮಾನಿಸಿದೆ.