ETV Bharat / state

ಕೊರೊನಾ‌ ಮುಕ್ತವಾಗುವತ್ತ ಚಿತ್ರದುರ್ಗ: 15 ದಿನಗಳಿಂದ ಒಂದೂ ಪ್ರಕರಣವಿಲ್ಲ! - ಚಿತ್ರದುರ್ಗ ಸುದ್ದಿ

ಹೊರ ರಾಜ್ಯಗಳಿಂದ ಆಗಮಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ದಾಖಲಾಗಿದ್ದ ಜನರಿಂದ ಪತ್ತೆಯಾಗಿದ್ದ 40 ಕೊರೊನಾ ಪ್ರಕರಣಗಳಿಂದ ಜನ ಭಯಭೀತರಾಗಿದ್ದರು. ಆದರೆ ಚಿತ್ರದುರ್ಗದ‌ ಮಂದಿಗೆ ಸಂತಸದ ಸುದ್ದಿಯೊಂದು ಬಂದಿದ್ದು, 40 ಸೋಂಕಿತರಲ್ಲಿ 39 ಜನರು ಗುಣಮುಖರಾಗಿದ್ದಾರೆ.

no-corona-case-in-chitradurga-since-15-days

author img

By

Published : Jun 12, 2020, 4:44 PM IST

ಚಿತ್ರದುರ್ಗ: ಕೋವಿಡ್ ಸೋಂಕಿನ ಮುಂದೆ ಇಡೀ ಜಗತ್ತು ಮಂಡಿ ಊರಿದೆ‌. ಅದೆಷ್ಟೋ ದೇಶಗಳು ಕೊರೊನಾದಿಂದ ಹೈರಾಣಾಗಿವೆ‌. ಇದರ ನಡುವೆ ಕೋಟೆನಾಡು ಚಿತ್ರದುರ್ಗ ಕೊರೊನಾ ಮುಕ್ತವಾಗುವತ್ತ ದಾಪುಗಾಲು ಹಾಕುತ್ತಿದ್ದು, ಪತ್ತೆಯಾಗಿದ್ದ 40ರಲ್ಲಿ 39 ಸೋಂಕಿತ ಪ್ರಕರಣಗಳು ಗುಣಮುಖವಾಗಿವೆ‌. ಇದೀಗ ಜಿಲ್ಲೆ ಸೇಫ್ ಎಂದು ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಹೊರ ರಾಜ್ಯಗಳಿಂದ ಆಗಮಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ದಾಖಲಾಗಿದ್ದ ಜನರಿಂದ ಪತ್ತೆಯಾಗಿದ್ದ 40 ಕೊರೊನಾ ಪ್ರಕರಣಗಳಿಂದ ಜನ ಭಯಭೀತರಾಗಿದ್ದರು. ಆದರೆ ಚಿತ್ರದುರ್ಗದ‌ ಮಂದಿಗೆ ಸಂತಸದ ಸುದ್ದಿಯೊಂದು ಬಂದಿದ್ದು, 40 ಸೋಂಕಿತರಲ್ಲಿ 39 ಜನರು ಗುಣಮುಖರಾಗಿದ್ದಾರೆ. ಚಿತ್ರದುರ್ಗಕ್ಕೆ ಹೊರಗಿನಿಂದ ಬಂದವರಿಂದಲೇ ಹೆಚ್ಚು ಸಂಖ್ಯೆಯಲ್ಲಿ ಸೋಂಕು ಕಂಡು ಬಂದಿದ್ದರಿಂದ ಸಮುದಾಯದ ಮಟ್ಟದಲ್ಲಿ ಹರಡಲಿಕ್ಕೆ ಬಿಡದೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಕಾರ್ಯನಿರ್ವಹಿಸಿ ಕಿಲ್ಲರ್ ಕೊರೊನಾಗೆ ಕಡಿವಾಣ ಹಾಕಿದ್ರು. ಆದ್ದರಿಂದ ಇಂದು ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರಿಲ್ಲದೆ 40 ಜನ‌ ಸೋಂಕಿತರಲ್ಲಿ 39 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಂದು ಪ್ರಕರಣದಲ್ಲಿ ಮಾತ್ರ‌ ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ (sari) ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದಲೂ ಒಂದೂ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಇದ್ರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದು, ಜನಸಾಮಾನ್ಯರ ಮೊಗದಲ್ಲಿ ಸಂತಸ ಮೂಡಿಸಿದೆ. ಇದನ್ನೇ ಮುಂದುವರೆಸಿಕೊಂಡು ಹೋಗಲಿ ಎಂಬುದು ಜನರ ಆಶಯವಾಗಿದೆ.

15 ದಿನಗಳಿಂದ ಯಾವುದೇ ಕೇಸ್ ಪತ್ತೆ ಆಗದೇ ಇರುವುದು‌ ನಮ್ಮ ಅದೃಷ್ಟ: ಡಿಸಿ

ಕೊರೊನಾ ಮುಕ್ತವಾಗುವತ್ತ ಚಿತ್ರದುರ್ಗ
ಇನ್ನು ರ್ಯಾಪಿಡ್ ರೆಸ್ಪಾನ್ಸ್ ಟೀಂ ಹಾಗೂ ಕೊರೊನಾ ವಾರಿಯರ್ಸ್ ಹಗಲಿರುಳು ಕಾರ್ಯನಿರ್ವಹಿಸಿದ ಪರಿಣಾಮ ಸೋಂಕು‌ ತಳಮಟ್ಟದಿಂದ ಹರಡುವುದನ್ನು‌ ತಡೆಯಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 40 ಪ್ರಕರಣಗಳಿದ್ದು, ಅದ್ರಲ್ಲಿ 39 ಜನ ಗುಣಮುಖರಾಗಿದ್ದಾರೆ. ಒಂದು ಪ್ರಕರಣ ಉಡುಪಿ ಜಿಲ್ಲೆಗೆ ಅನ್ವಯಿಸಲಿದೆ. ಕಳೆದ 15 ದಿನಗಳಿಂದ ಯಾವುದೇ ಕೇಸ್ ಪತ್ತೆ ಆಗದೇ ಇರುವುದು‌ ನಮ್ಮ ಅದೃಷ್ಟ. ಆದ್ದರಿಂದ ನಮ್ಮ ಜಿಲ್ಲೆ ಕೊರೊನಾ ಮುಕ್ತ ಜಿಲ್ಲೆಯಾಗುವತ್ತ ಸಾಗ್ತಿದೆ ಎಂದು ಡಿಸಿ ವಿನೋತ್ ಪ್ರಿಯಾ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.