ಚಿತ್ರದುರ್ಗ: ಮಹಾಮಾರಿ ಕೋವಿಡ್ಗೆ ನ್ಯೂಸ್ ಚಾನೆಲ್ ಕ್ಯಾಮರಾ ಮನ್ ಸಾವನ್ನಪ್ಪಿದ್ದಾರೆ.
ಬಸವರಾಜ್ ಕೋಟಿ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಕಳೆದ 10 ದಿನಗಳಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಬಸವರಾಜ್ಗೆ ಪತ್ನಿ ಮತ್ತು ಚಿಕ್ಕ ವಯಸ್ಸಿನ ಮಗ-ಮಗಳು ಇದ್ದಾರೆ.
ಚಿತ್ರದುರ್ಗದ ಪತ್ರಕರ್ತರು ಮತ್ತು ಅಧಿಕಾರಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು ಸಹೃದಯಿ ಬಸವರಾಜ್ ಕೋಟಿ. ಭಗಂತ ಕುಟುಂಬದವರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪತ್ರಕರ್ತರ ತಂಡ ಸಂತಾಪ ಸೂಚಿಸಿದೆ.
ದೇಶದಲ್ಲಿ ಹೆಚ್ಚುತ್ತಿವೆ ಪತ್ರಕರ್ತರ ಸಾವು...
ದೇಶದಲ್ಲಿ ದಿನದಿಂದ ದಿನಕ್ಕೆ ಪತ್ರಕರ್ತರ ಸಾವುಗಳು ಹೆಚ್ಚುತ್ತಿವೆ. ಕಳೆದ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಸುಮಾರು 52ಕ್ಕೂ ಹೆಚ್ಚು ವರದಿಗಾರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಎರಡನೇ ಅಲೆಯಿಂದಾಗಿ ಕಳೆದ ನಾಲ್ಕು ತಿಂಗಳಲ್ಲಿ ನೂರಾರು ಪತ್ರಕರ್ತರನ್ನು ದೇಶ ಕಳೆದುಕೊಂಡಿದೆ.