ETV Bharat / state

ಕೋಟೆನಾಡಲ್ಲಿದೆ ರಹಸ್ಯ ಗುಹೆ! - chitradurga

ಬೃಹತ್ ಕಲ್ಲುಬಂಡೆ...ಅದರಲ್ಲೊಂದು ಗುಹೆ...ಗುಹೆಯೊಳಗೆ ಚಿಕ್ಕ ಚಿಕ್ಕ ಕೊಠಡಿಗಳು... ಹೌದು, ಚಿತ್ರದುರ್ಗದಿಂದ 3 ಕಿ.ಮೀ. ದೂರದಲ್ಲಿರುವ ಗುಹೆ. 80 ಅಡಿ ಆಳದ ಈ ಗುಹೆ ಚಂದ್ರವಳ್ಳಿ ತೋಟದಲ್ಲಿರುವ ಅಂಕಲಿ ಮಠದಲ್ಲಿದೆ. ಅಂದಿನ ಕದಂಬ ಅರಸ ಮಯೂರವರ್ಮಾ ಯುದ್ಧದ ವೇಳೆ ಇದೇ ಗುಹೆಯನ್ನು ರಕ್ಷಾ ಕವಚದಂತೆ ಬಳಸುತ್ತಿದ್ದರು ಎಂಬುದು ಇತಿಹಾಸ.

ರಹಸ್ಯ ಗುಹೆ
author img

By

Published : Apr 7, 2019, 1:17 PM IST

ಅಂಕಲಿ ಮಠದಲ್ಲಿರುವ ಈ ಗುಹೆ ಕೌತುಕಗಳ ಆಗರ. ಯುದ್ಧದ ವೇಳೆ ರಾಜರು ತಮ್ಮ ಕುಟುಂಬವನ್ನು ಇದೇ ಗುಹೆಯಲ್ಲಿಟ್ಟು ರಕ್ಷಿಸುತ್ತಿದ್ದರಂತೆ. ಕಾಲಾನಂತರ ಹಿಂದೂ ಧರ್ಮ ಸಾರಲು ಬಂದಿದ್ದ, ಅಂಕಲಿ ಮಠದ ಪರದೇಶಪ್ಪ ಸ್ವಾಮೀಜಿ ಇದೇ ಗುಹೆಯಲ್ಲಿ ಕೆಲವರ್ಷ ಇದ್ದು, ನಂತರ ಇಲ್ಲೇ ಲಿಂಗೈಕ್ಯರಾದರಂತೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ವಾಮೀಜಿಯ ಸಮಾಧಿ ಗುಹೆಯಲ್ಲಿದೆ ಅಂತಾರೆ ಇತಿಹಾಸಕಾರರು. ಗುಹೆಯ ಜೊತೆ ವಿಭಿನ್ನ ಕೋಟೆಗಳು ಹಾಗೂ ಶಿವಲಿಂಗ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ.

ಕೋಟೆನಾಡಲ್ಲಿದೆ ರಹಸ್ಯ ಗುಹೆ

ಗುಹೆಯ ವಿಶೇಷತೆ ಏನು...?

ಈ ಐತಿಹಾಸಿಕ ಗುಹೆಯಲ್ಲಿ ಪ್ರಮುಖವಾಗಿ ನಂದಿ ದ್ವಾರ, ಗಜ ದ್ವಾರ, ಸಿಂಹ ದ್ವಾರ ಎಂಬ ಮೂರು ದ್ವಾರಗಳಿವೆ. ಜೊತೆಗೆ ರಹಸ್ಯವಾಗಿ ಮಾತನಾಡುವ ಕೋಣೆ, ಪರದೇಶಪ್ಪ ಸ್ವಾಮಿಜೀಯ ಗದ್ದುಗೆ, ಪೂಜೆ ಮಾಡಲು ಶಿವಲಿಂಗ, ಪುಟ್ಟ ಸ್ನಾನದ ಕೊಳ, ದೀಪಗಳನ್ನು ಇಡಲು ಪುಟ್ಟ ಕೋಣೆಗಳು, ರಹಸ್ಯ ರಸ್ತೆಗಳು, ಮಲಗುವ ಕೋಣೆ, ಖಜಾನೆ ರೂಮ್ ಕೂಡ ಇಲ್ಲಿದೆ. ಇಂತಹ ಕತ್ತಲ ಗುಹೆಯಲ್ಲಿ ಗಾಳಿ, ಬೆಳಕು, ಕುಡಿಯುವ ನೀರಿಗಾಗಿ ಅಂದಿನ ಜನ ಮಾಡಿಕೊಂಡಿದ್ದ ವ್ಯವಸ್ಥೆಯನ್ನ ಕೂಡ ಕಾಣಬಹುದು.

ಸಾಕಷ್ಟು ವಿಶೇಷತೆ ಹೊಂದಿರುವ ಕೋಟೆನಾಡಿನ ಈ ಗುಹೆಯನ್ನ ಭಾರತೀಯ ಪುರಾತತ್ವ ಇಲಾಖೆ ರಕ್ಷಿಸಬೇಕಿದೆ. ಜೊತೆಗೆ ಗುಹೆಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿದ್ರೆ ಇನ್ನಷ್ಟು ಪ್ರವಾಸಿಗರು ಇತ್ತ ಕಣ್ಣು ಹಾಯಿಸುತ್ತಾರೆ ಅನ್ನೋದು ಸ್ಥಳೀಯರ ಅಭಿಪ್ರಾಯ.

Intro:Body:

Mystery cave in fort city chitradurga

chitradurga: It is an ancient cave which acting as ear of kings secret talks. Even the sages and saints were living years together in this cave. Lets know what is the speciality of this cave. 

This cave is 3km away from Chithradurga. The cave which is 80 feet deep is in Chandravalli garden of Ankali math. History says Kadamba's king Mayoora varma was using the same cave as a protective shield during war. Later after the distruction of Kadamba kingdom shepherds used it fpr taking rest as well as secret discussions they say. 

byte: Manjunath, tourist()

Also during war kings used to protect their family with the help of this cave itself. Paradeshappa swamiji of Ankali math who came to preech hindu religion stayed here and left his last breath here. we can find his grave as a proof in the cave says historians.  Cave along with different forts and Shivalinga attracts the tourists. 

byte: Vanitha, tourist()

Speciality of the cave: 

The historic cave has three main doors, namely the Nandi Gate, Gaja Gate and Simha Gate. There is also a secret discussing room, The Paradeshappa Swamiji's gadduge(worshing spot), The Shiva Linga to worship, A small bathing pool, Small rooms to keep lamps(diya), secret roads, the bedroom, the treasury room etc. In such a dark cave we can find the alternative system they created in order to allow wind, light and drinking water fecility.

Cave with these many specialities have to be protected by the department of Archeology. Also if lighting fecility is created in the cave then it would attract still more visitors says localites.  

Etv bharat, Chitradurga

kannada newspaper, etv bharat, ಕೋಟೆನಾಡು, ರಹಸ್ಯ ಗುಹೆ, Special cave, fort city, chitradurga,

ಕೋಟೆನಾಡಲ್ಲಿದೆ ರಹಸ್ಯ ಗುಹೆ!

Anchor: ಅದು ಪುರಾತನ ಕಾಲದ ಗುಹೆ. ಅಂದಿನ ಕಾಲದ ರಾಜರ ರಹಸ್ಯ ಮಾತುಕತೆಗೆ ಕಿವಿಯಾಗಿದ್ದ ಬಂಡೆಗಲ್ಲಿದು. ಅಷ್ಟೇ ಏಕೆ ಋಷಿ ಮುನಿಗಳು ವರ್ಷಾನುಗಟ್ಟಲೇ ವಾಸವಾಗಿದ್ದೂ ಇದೇ ಗುಹೆಯಲ್ಲಿ ಅಂತೆ.... ಅರೇ ಏನಿದು ಅಂತೆಕಂತೆಯ ಗುಹಾಂತರ ಇತಿಹಾಸ ಅಂತೀರಾ? ಹಾಗಿದ್ರೆ ಒಂದ್ಸಲ ಇದೇ ಗುಹೆಯಲ್ಲಿ ರೌಂಡ್ ಹೊಡೆದುಕೊಂಡು ಬಂದು ಬಿಡೋಣಲ್ವೆ.     

ಬೃಹತ್ ಕಲ್ಲುಬಂಡೆ... ಅದರಲ್ಲೊಂದು ಗುಹೆ... ಗುಹೆಯೊಳಗೆ ಚಿಕ್ಕ ಚಿಕ್ಕ ಕೊಠಡಿಗಳು... ಹೌದು, ಚಿತ್ರದುರ್ಗದಿಂದ 3 ಕಿಮೀ ದೂರದಲ್ಲಿರುವ ಗುಹೆ. 80 ಅಡಿ ಆಳದ ಈ ಗುಹೆ ಚಂದ್ರವಳ್ಳಿ ತೋಟದಲ್ಲಿರುವ ಅಂಕಲಿ    ಮಠದಲ್ಲಿದೆ. ಅಂದಿನ ಕಂದಂಬ ಅರಸ ಮಯೂರ ವರ್ಮಾ ಯುದ್ಧದ ವೇಳೆ ಇದೇ ಗುಹೆಯನ್ನ ರಕ್ಷಾ ಕವಚದಂತೆ ಬಳಸುತ್ತಿದ್ದರು ಎಂಬುದು ಇತಿಹಾಸ. ಆದ್ರೆ ಕದಂಬ ಸಾಮ್ರಾಜ್ಯ ಅಳಿದ ನಂತರ ಪಾಳೇಗಾರರು ಇದೇ ಗುಹೆಯನ್ನ ವಿಶ್ರಾಂತಿಗಾಗಿ ಹಾಗೂ ರಹಸ್ಯ ಮಾತುಕತೆಗೆ ಉಪಯೋಗಿಸುತ್ತಿದ್ದರು ಎಂಬುದು ಇತಿಹಾಸಕಾರರ ಅಭಿಪ್ರಾಯ.  

ಹಾಗೆಯೇ ಯುದ್ಧದ ವೇಳೆ ರಾಜರು ತಮ್ಮ ಕುಟುಂಬವನ್ನು ಇದೇ ಗುಹೆಯಲ್ಲಿಟ್ಟು ರಕ್ಷಿಸುತ್ತಿದ್ದರಂತೆ. ಕಾಲಾನಂತರ  ಹಿಂದೂ ಧರ್ಮ ಸಾರಲು ಬಂದಿದ್ದ, ಅಂಕಲಿ ಮಠದ ಪರದೇಶಪ್ಪ ಸ್ವಾಮೀಜಿ ಇದೇ ಗುಹೆಯಲ್ಲಿ ಕೆಲವರ್ಷ ಇದ್ದು,  ನಂತರ ಇಲ್ಲೇ ಲಿಂಗೈಕ್ಯರಾದರಂತೆ. ಇದಕ್ಕೆ ಸಾಕ್ಷಿ ಎಂಬಂತೆ ಸ್ವಾಮೀಜಿಯ ಸಮಾಧಿ ಗುಹೆಯಲ್ಲಿದೆ ಅಂತಾರೆ ಇತಿಹಾಸಕಾರರು. ಗುಹೆಯ ಜೊತೆ ವಿಭಿನ್ನ ಕೋಟೆಗಳು ಹಾಗೂ ಶಿವಲಿಂಗ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿವೆ. 

ಬೈಟ್ -2: ವನಿತಾ... ಪ್ರವಾಸಿಗರು 

ಗುಹೆಯ ವಿಶೇಷತೆ ಏನು...?

ಈ ಐತಿಹಾಸಿಕ ಗುಹೆಯಲ್ಲಿ ಪ್ರಮುಖವಾಗಿ ನಂದಿ ದ್ವಾರ, ಗಜ ದ್ವಾರ, ಸಿಂಹ ದ್ವಾರ ಎಂಬ ಮೂರು ದ್ವಾರಗಳಿವೆ. ಜೊತೆಗೆ ರಹಸ್ಯವಾಗಿ ಮಾತನಾಡುವ ಕೋಣೆ, ಪರದೇಶಪ್ಪ ಸ್ವಾಮಿಜೀಯ ಗದ್ದುಗೆ, ಪೂಜೆ ಮಾಡಲು ಶಿವಲಿಂಗ, ಪುಟ್ಟ ಸ್ನಾನದ ಕೊಳ, ದೀಪಗಳನ್ನು ಇಡಲು ಪುಟ್ಟ ಕೋಣೆಗಳು, ರಹಸ್ಯ ರಸ್ತೆಗಳು, ಮಲಗುವ ಕೋಣೆ, ಖಜಾನೆ ರೂಮ್ ಕೂಡ ಇಲ್ಲಿದೆ. ಇಂತಹ ಕತ್ತಲ ಗುಹೆಯಲ್ಲಿ ಗಾಳಿ, ಬೆಳಕು, ಕುಡಿಯುವ ನೀರಿಗಾಗಿ ಅಂದಿನ ಜನ ಮಾಡಿಕೊಂಡಿದ್ದ ವ್ಯವಸ್ಥೆಯನ್ನ ಕೂಡ ಕಾಣಬಹುದು. 

ಸಾಕಷ್ಟು ವಿಶೇಷತೆ ಹೊಂದಿರುವ 

ಕೋಟೆನಾಡಿನ ಈ ಗುಹೆಯನ್ನ ಭಾರತೀಯ ಪುರಾತತ್ವ ಇಲಾಖೆ ರಕ್ಷಿಸಬೇಕಿದೆ. ಜೊತೆಗೆ ಗುಹೆಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿದ್ರೆ ಇನ್ನಷ್ಟು ಪ್ರವಾಸಿಗರು ಇತ್ತ ಕಣ್ಣು ಹಾಯಿಸುತ್ತಾರೆ ಅನ್ನೋದು ಸ್ಥಳೀಯರ ಅಭಿಪ್ರಾಯ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.