ಚಿತ್ರದುರ್ಗ: ಮಾಜಿ ಕೈ ಶಾಸಕ ಗೋವಿಂದಪ್ಪ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ಮಗನ ಮದುವೆ ಮಾಡಿದ್ದ ಬೆನ್ನಲ್ಲೇ ಈಗಾಗಲೇ ಪ್ರಕರಣ ದಾಖಲಾಗಿದೆ. ಅದರೆ ಇದೇ ಲಾಕ್ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾ ಸಚಿವ ಶ್ರೀ ರಾಮುಲು ವಿರುದ್ದ ಯಾವುದೇ ಪ್ರಕರಣ ದಾಖಲಿಸಿಲ್ಲವೆಂದು ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮಾಜಿ ಶಾಸಕ ಗೋವಿಂದಪ್ಪ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಎ. ನಾರಾಯಣ ಸ್ವಾಮಿ ದಾಖಲಾಗಿರುವ ಪ್ರಕರಣದ ಬಗ್ಗೆ ಚಾರ್ಜ್ಶೀಟ್ ಹಾಕ್ಬೇಕಾ ಇಲ್ಲಾ ಬಿ ರಿಪೋರ್ಟ್ ಹಾಕ್ಬೇಕಾ ಎಂಬುದನ್ನು ಮಾಜಿ ಶಾಸಕರ ಮಗನ ಮದುವೆಯ ಫೋಟೊ ನೋಡಿ ಎಸ್ಪಿಯವರ ಬಳಿ ಮಾತನಾಡುತ್ತೇನೆ ಎಂದರು.
ಪರಶುರಾಂಪುರದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮ ಕುರಿತು ನನ್ನ ಮೇಲೆ ಪ್ರಕರಣ ದಾಖಲಿಸಿದರೆ ನಾನು ಬೇಡಾ ಎನ್ನುವುದಿಲ್ಲ, ಅದರೆ ಮಾಜಿ ಶಾಸಕ ಗೋವಿಂದಪ್ಪ ವಿರುದ್ಧ ಪ್ರಕರಣ ದಾಖಲಾಗಿರುವುದರ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದು ಬಂದಿದ್ದು, ಆ ಮದುವೆಯಲ್ಲಿ ಐವತ್ತು ನೂರು ಜನರ ಮೇಲೆ ಸೇರಿದರೆ ನಾನೇ ಬಿ ರಿಪೋರ್ಟ್ ಹಾಕಲು ಎಸ್ಪಿ ಬಳಿ ಹೇಳುವೆ ಎಂದರು. ಇನ್ನು ಪರಶುರಾಂಪುರ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇ, ಅದಕ್ಕೆ ಕ್ಷಮೆಯಾಚಿಸುತ್ತೇನೆ. ನನ್ನ ಮೇಲೆ ಎಫ್ಐಆರ್ ಹಾಕಿದ್ರೆ, ನನಗೆ ಸಂಸ್ಕಾರ ಇದೇ ಯಾಕೆ ಎಫ್ಐಆರ್ ಹಾಕಿದ್ದೀರಿ ಎಂದು ಕೇಳುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.