ETV Bharat / state

ಚಿತ್ರದುರ್ಗದಲ್ಲಿ ಜಾರಿಗೆ ಬರಲಿಲ್ಲ ಮೋಟಾರ್ ವಾಹನ ಕಾಯ್ದೆ! - ಸಾರ್ವಜನಿಕರಿಗೆ ಜಾಗೃತಿ

ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿದೆ. ಆದ್ರೆ ಚಿತ್ರದುರ್ಗದಲ್ಲಿ ಮಾತ್ರ ಈ ಕಾಯ್ದೆಯನ್ನು ಜಾರಿಗೆ ತರುವ ಮೊದಲು ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಹೀಗಾಗಿ ಈ ತಿಂಗಳ ಅಂತ್ಯದವರೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಬಳಿಕ ಅಕ್ಟೋಬರ್​ 1ರಿಂದ ಈ ನಿಯಮ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.

ಜಾರಿಗೆ ಬಾರದ ಮೋಟಾರ್ ವಾಹನ ಕಾಯ್ದೆ
author img

By

Published : Sep 15, 2019, 3:43 PM IST

ಚಿತ್ರದುರ್ಗ: ಜಿಲ್ಲೆಯಲ್ಲಿ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದವರಿಗೆ ದಂಡ ಹಾಕುವ ಮೊದಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಕೊನೆಯವರೆಗೂ ದುಬಾರಿ ದಂಡ ಹಾಕದೆ, ಮೊದಲು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇಡೀ ಜಿಲ್ಲೆಯ ಪಿಎಸ್ಐ, ಎಸ್ಐಗಳು ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಿ ನಿಯಮ ಮತ್ತು ದುಬಾರಿ ದಂಡದ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ಧರಿಸಿದ್ದಾರೆ.

ಜಾರಿಗೆ ಬಾರದ ಮೋಟಾರ್ ವಾಹನ ಕಾಯ್ದೆ

ಈಗ ಡ್ರಿಂಕ್ ಅಂಡ್ ಡ್ರೈವ್​ಗೆ ಮಾತ್ರ ಕಡ್ಡಾಯವಾಗಿ ದುಬಾರಿ ದಂಡ ಹಾಕಲಾಗುತ್ತಿದೆ. ಉಳಿದಂತೆ ಹೆಲ್ಮೆಟ್, ಡಿಎಲ್, ಆರ್​​ಸಿ ಬುಕ್​​ಗಳಿಗೆ ಹಳೆ ದಂಡವನ್ನೇ ಹಾಕಲಾಗುತ್ತಿದೆ. ಸೆಪ್ಟಂಬರ್ ಅಂತ್ಯದವರೆಗೆ ಜಾಗೃತಿ ಮೂಡಿಸಿ ಆಕ್ಟೋಬರ್ 1 ರಿಂದ ಪರಿಷ್ಕೃತ ದಂಡ ವಿಧಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಅಧಿಕಾರಿ ಮೋಟರ್ ವಾಹನ ಕಾಯ್ದೆ ಅಡಿ ದೂರು ದಾಖಲಿಸುವಾಗ "ಬಾಡಿ ಕ್ಯಾಮೆರಾ'' ಕಡ್ಡಾಯವಾಗಿ ಹಾಕಿಕೊಂಡಿರಬೇಕು. ದಂಡ ವಿಧಿಸುವ ಪೊಲೀಸರು ಬಾಡಿ ಕ್ಯಾಮೆರಾ ಹಾಕಿಕೊಳ್ಳುವುದರಿಂದ ಸವಾರರು ಮತ್ತು ಪೊಲೀಸರ ನಡುವಿನ ಸಂಭಾಷಣೆ ರೆಕಾರ್ಡ್ ಆಗುತ್ತೆ. ಅಲ್ಲದೆ ಅಕ್ರಮಕ್ಕೆ ಅವಕಾಶ ಇರೋದಿಲ್ಲ. ಅದಕ್ಕಾಗಿಯೇ ಜಿಲ್ಲೆಯಲ್ಲಿ 120 ಬಾಡಿ ಕ್ಯಾಮೆರಾಗಳಿವೆ ಎನ್ನುತ್ತಾರೆ ಜಿಲ್ಲಾ ಎಸ್​ಪಿ ಡಾ.ಕೆ. ಅರುಣ್​​​.

ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಚಿತ್ರದುರ್ಗ ಜಿಲ್ಲಾ ಪೊಲೀಸರು ಮೊದಲು ಜಾಗೃತಿ ಮೂಡಿಸಿ ನಂತರ ದಂಡಾಸ್ತ್ರಕ್ಕೆ ಮುಂದಾಗಿರುವುದು ಇತರರಿಗೂ ಆದರ್ಶವಾಗಿದೆ.

Intro:ದುಬಾರಿ ದಂಡದಿಂದ ಹೈರಾಣಾದ ವಾಹನ ಸವಾರರು : ಚಿತ್ರದುರ್ಗದಲ್ಲಿ ಜಾರಿಗೆ ಬಾರದ ಮೋಟಾರ್ ಕಾಯ್ದೆ
ವಿಶೇಷ ವರದಿ
ಆ್ಯಂಕರ್:- ಇಡೀ ದೇಶಾದ್ಯಂತ ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ತೆತ್ತಲು ಸಾರ್ವಜನಿಕರು ಹೈರಾಣಾಗಿದ್ದಾರೆ. ವಾಹನ ಕಾಯ್ದೆ ತಿದ್ದುಪಡಿ ಜಾರಿ ಆಗುತ್ತಿದ್ದಂತೆ ಪೊಲೀಸರು ಬಕಪಕ್ಷಿಗಳಂತೆ ಕಾದು ನಿಂತು ಫೈನ್ ಹಾಕುತ್ತಿದ್ದಾರೆ. ಆದ್ರೆ ಚಿತ್ರದುರ್ಗದಲ್ಲಿ ಜಿಲ್ಲೆಯಲ್ಲಿ ಮಾತ್ರ ಪೊಲೀಸರು ಮಾತ್ರ ಕೈಗೆ ಅಸ್ತ್ರ ಸಿಕ್ಕಿದೆ ಅಂತ ಸಿಕ್ಕಾಪಟ್ಟೆ ಫೈನ್ ಹಾಕ್ತಾ ಇಲ್ಲ... ಇದೇನಪ್ಪ ಪೊಲೀಸರು ಫೈನ್ ಹಾಕ್ತಾ ಇಲ್ವಾ ಅಂತ ಹುಬ್ಬೇರಿಸುತ್ತಿದ್ದೀರಾ.... ಈ ಸ್ಟೋರಿ ನೋಡಿ....
ಲುಕ್,,,,
ಫ್ಲೋ,,,,,
ವಾ01:- ವಾಹನ ಕಾಯ್ದೆ ತಿದ್ದುಪಡಿಯಾಗಿ ದುಬಾರಿ ದಂಡ ಜಾರಿಯಾಗುತ್ತಿದ್ದಂತೆ ಪೊಲೀಸರು ನಾಮುಂದು, ತಾಮುಂದು ಅಂತ ಸಿಕ್ಕಾಪಟ್ಟೆ ಫೈನ್ ಹಾಕುತ್ತಿದ್ದಾರೆ. ಕೆಲ ಜಿಲ್ಲೆಗಳಲ್ಲಂತೂ ಒಂದೇ ದಿನಕ್ಕೆ ಲಕ್ಷ ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಆದ್ರೆ, ಇಲ್ಲಿನ ಪೊಲೀಸರು ಮಾತ್ರ ಲಕ್ಷ ಲಕ್ಷ ದಂಡ ವಸೂಲಿ ಮಾಡೋದಕ್ಕಿಂತ ಕರ್ತವ್ಯದ ಮೇಲೆ ಲಕ್ಷ್ಯವಹಿಸಿದ್ದಾರೆ. ಹೌದು, ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ದುಬಾರಿ ದಂಡ ಹಾಕೋದಕ್ಕಿಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಕೈಗೆ ದಂಡಾಸ್ತ್ರಾ ಸಿಕ್ಕಿದೆ ಅಂತ ಅದನ್ನ ಬಳಸದೆ ಜನಸಾಮಾನ್ಯರಿಗೆ ಅನುಕೂಲ ಆಗಲಿ ಅಂತ ಸಿಕ್ಕಾಪಟ್ಟೆ ದಂಡ ಹಾಕುತ್ತಿಲ್ಲ. ಸೆಪ್ಟಂಬರ್ ಕೊನೆಯವರೆಗೂ ದುಬಾರಿ ದಂಡ ಹಾಕದೆ ಮೊದಲು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇಡೀ ಜಿಲ್ಲೆಯ ಪಿಎಸ್ಐ, ಎಸ್ಐಗಳು ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಿ ನಿಯಮ ಮತ್ತು ದುಬಾರಿ ದಂಡದ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಠರಾವು ಹೊರಡಿಸಿದ್ದಾರೆ...
ಫ್ಲೋ,,,,,
ಬೈಟ್01:- ಡಾ.ಕೆ.ಅರುಣ್, ಎಸ್ಪಿ ಚಿತ್ರದುರ್ಗ
ವಾಯ್ಸ್ 02:- ಈಗ ಡ್ರಿಂಕ್ ಅಂಡ್ ಡ್ರೈವ್ಗೆ ಮಾತ್ರ ಕಡ್ಡಾಯವಾಗಿ ದುಬಾರಿ ದಂಡ ಹಾಕಲಾಗುತ್ತಿದೆ. ಉಳಿದಂತೆ ಹೆಲ್ಮೆಟ್, ಡಿಎಲ್, ಆರ್ಸಿ ಬುಕ್ಗಳಿಗೆ ಹಳೇ ದಂಡವನ್ನೇ ಹಾಕಲಾಗುತ್ತಿದೆ. ಸೆಪ್ಟಂಬರ್ ಅಂತ್ಯದವರೆಗೆ ಜಾಗೃತಿ ಮೂಡಿಸಿ ಆಕ್ಟೋಬರ್ 1 ರಿಂದ ಪರಿಷ್ಕೃತ ದಂಡ ವಿಧಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಅಧಿಕಾರಿ ಮೋಟರ್ ಕಾಯ್ದೆ ಅಡಿ ದೂರು ದಾಖಲಿಸುವಾಗ "ಬಾಡಿ ಕ್ಯಾಮರಾ'' ಕಡ್ಡಾಯವಾಗಿ ಹಾಕಿಕೊಂಡಿರಬೇಕು. ದಂಡ ವಿಧಿಸುವ ಪೊಲೀಸರು ಬಾಡಿ ಕ್ಯಾಮರಾ ಹಾಕಿಕೊಳ್ಳುವುದರಿಂದ ಸವಾರರು ಮತ್ತು ಪೊಲೀಸರ ನಡುವಿನ ಸಂಭಾಷಣೆ ರೆಕಾರ್ಡ್ ಆಗತ್ತೆ. ಅಲ್ಲದೆ ಅಕ್ರಮಕ್ಕೆ ಅವಕಾಶ ಇರೋದಿಲ್ಲ. ಅದಕ್ಕಾಗಿಯೇ ಜಿಲ್ಲೆಯಲ್ಲಿ 120 ಬಾಡಿ ಕ್ಯಾಮರಾಗಳಿವೆ ಎನ್ನುತ್ತಾರೆ ಎಸ್ಪಿ ಸಾಹೇಬರು....
ಫ್ಲೋ,,,,,
ಬೈಟ್02:-ಡಾ.ಕೆ.ಅರುಣ್, ಎಸ್ಪಿ ಚಿತ್ರದುರ್ಗ
ವಾಯ್ಸ್ 03:- ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಅದರೆ ಬಹಳಷ್ಟು ಮಂದಿ ಕೈಗೆ ಅಸ್ತ್ರ ಸಿಕ್ಕಿದೆ ಅಂತ ಜನ ಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆ. ಆದ್ರೆ, ಚಿತ್ರದುರ್ಗ ಜಿಲ್ಲಾ ಪೊಲೀಸರು ಮಾತ್ರ ಮೊದಲು ಜಾಗೃತಿ ಮೂಡಿಸಿ ನಂತರ ದಂಡಾಸ್ತ್ರಕ್ಕೆ ಮುಂದಾಗಿರುವುದು ಇತರರಿಗೂ ಆದರ್ಶವಾಗಿದೆ....
ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ.

Body:noConclusion:fines pkg
ETV Bharat Logo

Copyright © 2025 Ushodaya Enterprises Pvt. Ltd., All Rights Reserved.