ETV Bharat / state

ನಾನು ಭೋಜನ ಕೂಟಕ್ಕೆ ಭಾಗವಹಿಸಲು ಆಗಲಿಲ್ಲ: ಶಾಸಕ ತಿಪ್ಪಾರೆಡ್ಡಿ ಸ್ಪಷ್ಟನೆ - MLA GH Thippareddy

ಸಿಎಂ ಆಯೋಜಿಸಿದ ಭೋಜನ ಕೂಟಕ್ಕೆ ನಾನು ಭಾಗವಹಿಸಲು ಆಗಲಿಲ್ಲ ಎಂದು ಚಿತ್ರದುರ್ಗ ನಗರದಲ್ಲಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದರು‌‌.

chitradurga
ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ
author img

By

Published : Feb 3, 2021, 12:46 PM IST

ಚಿತ್ರದುರ್ಗ: ಪಂಚಮಶಾಲಿ ಸ್ವಾಮೀಜಿಗಳ ಪಾದಯಾತ್ರೆ ಹಿನ್ನೆಲೆ ನಾನು ಭೋಜನ ಕೂಟಕ್ಕೆ ಭಾಗವಹಿಸಲು ಆಗಲಿಲ್ಲ ಎಂದು ನಗರದಲ್ಲಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದರು‌‌.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ತಿಪ್ಪಾರೆಡ್ಡಿ, ಸಿಎಂ ಆಯೋಜಿಸಿದ ಭೋಜನ ಕೂಟಕ್ಕೆ ಗೈರು ವಿಚಾರವಾಗಿ ಸ್ಪಷ್ಟನೆ ನೀಡಿದರು. ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿಯನ್ನು ಬರಮಾಡಿಕೊಳ್ಳಲು ಹೋಗಿದ್ದೆ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನಾವೆಲ್ಲಾ ಸಭೆ ಸೇರಿದ್ದು ಹೌದು, ನಮ್ಮ ಕಷ್ಟ ಸುಖಗಳು, ಕ್ಷೇತ್ರದ ಅನುದಾನ ಕುರಿತು ಚರ್ಚಿಸಿದ್ದೇವೆ ಎಂದು ಮಂಗಳವಾರ ನಡೆದ ಸಭೆ ಕುರಿತು ಹೇಳಿದರು.

ಸ್ಪಷ್ಟನೆ ನೀಡಿದ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ

ನಾವು ಪಕ್ಷಕ್ಕಾಗಿಲಿ, ಮುಖ್ಯಮಂತ್ರಿಯವರಿಗಾಗಲೀ ಮುಜುಗರ ತರುವ ಕೆಲಸ ಮಾಡಿಲ್ಲ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ಸಿದ್ದಾಂತಕ್ಕೆ ನಾನು ಬದ್ಧನಾಗಿರುವೆ ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಮಾಧ್ಯಮಗಳಿಗೆ ಸಭೆ ಕುರಿತು ಸಮಜಾಯಿಸಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.