ಚಿತ್ರದುರ್ಗ: ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಹಾಡಹಗಲೇ ಅತ್ಯಾಚಾರ ಎಸಗಿ ಕೊಲೆಗೈದಿರುವ ಘಟನೆ ಚಿತ್ರದುರ್ಗ ತಾಲೂಕಿನ ಗ್ರಾಮವೊಂದರ ಹೊರವಲಯದಲ್ಲಿ ನಡೆದಿದೆ.
ಗೃಹ ನಿರ್ಮಾಣ ಮಾಡುತ್ತಿದ್ದರಿಂದ ಸಂತ್ರಸ್ತೆಯ ಕುಟುಂಬ ಗ್ರಾಮದ ಸಮುದಾಯ ಭವನದಲ್ಲಿ ವಾಸವಿತ್ತು. ಆದ ಕಾರಣ ಅನಿರ್ವಾಯವಾಗಿ ಶೌಚಾಲಯಕ್ಕೆ ಬಯಲಿಗೆ ಹೋಗಿಬರಬೇಕಿತ್ತು. ಗ್ರಾಮದಿಂದ ಸ್ವಲ್ಪ ಹೊರವಲಯಕ್ಕೆ ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಬಹಳ ಸಮಯವಾದರೂ ಬಾರದೆ ಹೋದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಬಳಿಕ ಗ್ರಾಮದ ಪಕ್ಕ ಮೆಕ್ಕೆಜೋಳದ ಜಮೀನಿನಲ್ಲಿ ವಿವಸ್ತ್ರವಾದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಕ್ಕಳನ್ನು ಭವನದಲ್ಲಿ ಬಿಟ್ಟು ಹೆಂಡತಿಯೊಂದಿಗೆ ಪತಿ ಆಸ್ಪತ್ರೆಗೆ ತೆರಳಿದ್ದ. ಮರಳಿ ಬರುವಷ್ಟರಲ್ಲಿ ಈ ದುರಂತ ನಡೆದು ಹೋಗಿದೆ ಎನ್ನುತ್ತಾರೆ ಪೋಷಕರು. ಬಾಲಕಿಯ ಮೃತದೇಹದ ಮೇಲೆ ಪರಚಿದ ಗುರುತುಗಳಿವೆ. ಚಪ್ಪಲಿ, ನೀರು ತುಂಬಿದ್ದ ತಂಬಿಗೆ ಸಮೀಪದಲ್ಲೇ ಬಿದ್ದಿದೆ. ಭರಮಸಾಗರ ಠಾಣೆ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. (ಅಪ್ರಾಪ್ತೆ ಮೇಲೆ ನಿರಂತರ ರೇಪ್... ಗರ್ಭಿಣಿಯಾಗ್ತಿದ್ದಂತೆ ಹೊರಬಿದ್ದ ಪ್ರಕರಣ)