ಚಿತ್ರದುರ್ಗ: ಸರ್ಕಾರಿ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ವಿಳಂಬವಾಗಿ ಆಗಮಿಸುತ್ತಿರುವ ಘಟನೆಗಳು ಮರುಕಳಿಸುತ್ತಿವೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಅಕ್ರಮ ಸಕ್ರಮ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಸಚಿವರು ಸರಿಯಾದ ಸಮಯಕ್ಕೆ ಆಗಮಿಸದೆ ಫಲಾನುಭವಿಗಳನ್ನು ಕಾಯಿಸಿದ ಪ್ರಸಂಗ ನಡೆಯಿತು.
ವಸತಿ ಹಕ್ಕು ಪತ್ರ ಪಡೆಯಲು ಬೆಳಗ್ಗೆ 10 ಗಂಟೆಯಿಂದ ಕಾಯುತ್ತಿದ್ದ ಫಲಾನುಭವಿಗಳಿಗೆ 12.30 ಗಂಟೆಯಾದ್ರೂ ಸಚಿವರು ಆಗಮಿಸಿದೆ ಇರುವುದಕ್ಕೆ ಜನ ಹಿಡಿಶಾಪ ಹಾಕುತ್ತಿದ್ದರು. ನಾಯಕನಹಟ್ಟಿ ಪಟ್ಟಣ ಪಂಚಾಯತಿ ಎದುರು ಮಾಸ್ಕ್ ಧರಿಸಿದ್ದ ನೂರಾರು ಫಲಾನುಭವಿಗಳು ಭಾಗವಹಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತು ಗಂಟೆಗಟ್ಟಲೆ ಕಾಯುತ್ತಿದ್ದರು.