ಚಿತ್ರದುರ್ಗ: ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿಗೆ ಮತಿಭ್ರಮಣೆಯಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾಜಿ ಸಿಎಂ ವಿರುದ್ಧ ವಾಗ್ದಾನ ನಡೆಸಿದರು.
ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಇಷ್ಟು ದಿನ ನೆರೆ ಪರಿಹಾರ ಕೊಟ್ಟಿಲ್ಲ ಎಂದು ಕುಮಾರಸ್ವಾಮಿಯವರು ಬೊಬ್ಬೆ ಹೊಡೆಯುತ್ತಿದ್ದರು. ಕೇಂದ್ರ ನೆರೆ ಪರಿಹಾರ ಬಂದ ಬಳಿಕ ಇದೀಗ ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ. ಅಂದು ಕೇಂದ್ರದಿಂದ ಹಣ ಬರಲ್ಲ ಅಂದರು, ಹಣ ಬಂದ ಬಳಿಕ ಹೀಗೆ ಮಾತನಾಡುತ್ತಿದ್ದಾರೆ. ನೆರೆ ಪರಿಹಾರ ನೀಡುವಲ್ಲಿ ಭ್ರಷ್ಟಾಚಾರ, ರಾಜಕೀಯ ಮಾಡುತ್ತಿದ್ದಾರೆ ಎಂಬುದು ಸರಿಯಲ್ಲ. ಅಂತವರ ಬಾಯಿ ಮುಚ್ಚಿಸಲು ಆಗೋದಿಲ್ಲ ಎಂದರು.
ಇನ್ನು, ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾಗ ಎಷ್ಟು ಹಣ ತಂದರು, ಸಿಎಂ ಯಡಿಯೂರಪ್ಪ ಮೇಲೆ ಜನರಿಗೆ ವಿಶ್ವಾಸ ಇದೆ. ನೆರೆ ಪೀಡಿತರಿಗೆ ಸೂಕ್ತ ನೆರವು ನೀಡಲಾಗುವುದು, ಎನ್‌ಡಿಆರ್‌ಎಫ್ ಪ್ರಕಾರ ನಷ್ಟಕ್ಕೆ ಕೇಂದ್ರದಿಂದ ಸೂಕ್ತ ಪರಿಹಾರ ನೀಡಿದೆ ಎಂದರು.