ಚಿತ್ರದುರ್ಗ: ಇನ್ನೂ ಎರಡು ವರ್ಷ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನೂ ಹೇಳಬೇಕು ಅಂದರೆ, ಮುಂದಿನ ಚುನಾವಣೆಯೂ ಸಹ ಯಡಿಯೂರಪ್ಪ ನೇತೃತ್ವದಲ್ಲಿಯೇ ಮಾಡುತ್ತೇವೆ ಎಂದು ಸಚಿವ ನಾರಾಯಣ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಮೂರು ಪಕ್ಷಗಳ ಸರ್ಕಾರ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ಸ್ವಂತ ಅಭಿಪ್ರಾಯ. ಆ ಬಗ್ಗೆ ನಾನೇನು ಟಿಪ್ಪಣಿ ಮಾಡುವುದಿಲ್ಲ. ಮೈಸೂರು ಭಾಗದಲ್ಲಿ ಈ ವಾತಾವರಣ ನನ್ನ ಗಮನಕ್ಕೆ ಬಂದಿಲ್ಲ ಎಂದರು. ನಿರಾಣಿ ಹೈಕಮಾಂಡ್ ಬುಲಾವ್ ವಿಚಾರವಾಗಿ ಮಾತನಾಡುತ್ತಾ, ಅವರಿಗೆ ಬೇರೆ ಬೇರೆ ಕೆಲಸಗಳು ಇರುತ್ತವೆ. ನಿರಾಣಿ ಒಬ್ಬ ಉದ್ಯಮಿ. ಬೇರೆ ಕೆಲಸಗಳಿರುವುದಿಂದ ಕರೆಸಿಕೊಂಡಿರುತ್ತಾರೆ, ಅದರಲ್ಲಿ ತಪ್ಪೇನಿದೆ? ಎಂದರು.
17 ಮಂದಿ ಶಾಸಕರಲ್ಲಿ ಬಿರುಕು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆಲ ಎಂದರು. ಜೊತೆಗೆ, ರಮೇಶ್ ಜಾರಕಿಹೊಳಿ ಪ್ರಕರಣವೆಲ್ಲಾ ಅಂತ್ಯವಾಗುತ್ತದೆ. ಸಿಎಂ ಜೊತೆ ಚರ್ಚೆ ಮಾಡುತ್ತಾರೆ. ಕೇಸ್ ಕ್ಲೀಯರ್ ಆದ ತಕ್ಷಣ ಮಂತ್ರಿ ಆಗುತ್ತಾರೆ ಎಂದರು.
ಇದನ್ನೂ ಓದಿ: ದಶಕಗಳ ಹೋರಾಟಕ್ಕೆ ಪ್ರತಿಫಲ: ಕುಶಾಲನಗರ ತಾಲೂಕು ಉದ್ಘಾಟನೆ