ETV Bharat / state

ಹತಾಶೆಯಿಂದ ಸಿದ್ದರಾಮಯ್ಯ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ: ಬಿ.ಸಿ.ಪಾಟೀಲ್

author img

By

Published : Mar 26, 2022, 1:23 PM IST

ಸಿದ್ಧರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಇತ್ತ ಡಿ.ಕೆ ಶಿವಕುಮಾರ್​ ಅವರು ಕೂಡ ಈ ಕನಸಿನಿಂದ ಹೊರತಲ್ಲ. ಹಾಗಾಗಿ ಹತಾಶೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿ.ಸಿ ಪಾಟೀಲ್​ ಹೇಳಿದರು.

Minister BC Patil
ಸಚಿವ ಬಿ.ಸಿ. ಪಾಟೀಲ್

ಚಿತ್ರದುರ್ಗ: ಹಿಜಾಬ್, ಸೆರಗು, ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಚಿತ್ರದುರ್ಗದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಡಿ.ಕೆ ಶಿವಕುಮಾರ್​, ಸಿದ್ಧರಾಮಯ್ಯ ನಡುವಿನ ಕಂದಕ ಹೆಚ್ಚುತ್ತಿದೆ. ಸಿದ್ಧರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆಂದು ಎನಿಸುತ್ತಿದೆ. ಡಿಕೆ ಶಿವಕುಮಾರ್​ ಅವರು ಕೂಡ ತಾನೇ ಸಿಎಂ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹತಾಶೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಮನಸೋ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿ.ಸಿ ಪಾಟೀಲ್​ ಹೇಳಿದ್ದಾರೆ.

ಸಚಿವ ಬಿ.ಸಿ. ಪಾಟೀಲ್

ಕಾಂಗ್ರೆಸ್ ನಾಯಕರಿಂದಲೇ ಹಿಜಾಬ್ ಗೊಂದಲ ಸೃಷ್ಟಿಯಾಗಿದ್ದು ಎಂದು ಬಿ.ಸಿ. ಪಾಟೀಲ್​ ಆರೋಪಿಸಿದ್ದಾರೆ. ಅಲ್ಲದೇ ದೇಶದ ಇತಿಹಾಸ ಹೇಳುವ ದಿ ಕಾಶ್ಮೀರ್​ ಫೈಲ್ಸ್ ಚಿತ್ರ ಅರ್ಥ ಹೀನ ಎನ್ನುವುದು ಸಮಂಜಸವಲ್ಲ. ಯಾವುದೇ ಒಂದು ಜಾತಿ, ಧರ್ಮ ತೆಗಳುವುದು ಮತ್ತು ಬೇರೊಬ್ಬರಿಗೆ ನೋವಾಗುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಸಿದ್ಧರಾಮಯ್ಯ ಸಿಎಂ ಆಗಿದ್ದವರು, ತೂಕವಾಗಿ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಅವರ ಮಾತುಗಳು ಅವರಿಗೇ ಮಾರಕ ಆಗಲಿವೆ ಎಂದು ಹೇಳಿದರು.

ಇದನ್ನೂ ಓದಿ: ಸ್ವಾಮೀಜಿಗಳ ವಸ್ತ್ರದ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ: ಮನಗೂಳಿ ಸಂಗನಬಸವ ಶ್ರೀ ಕಿಡಿ

ಇನ್ನೂ ಸಿನಿಮಾಗಳಿಗೆ ಸಂಬಂಧ ಪಟ್ಟಂತೆ ಹೇಳುವುದಾದರೆ, ನಾವು ಯಾವುದೇ ಸಿನಿಮಾ ತೆಗೆದು ಬೇರೆ ಸಿನಿಮಾ ಹಾಕಲು ಎಲ್ಲೂ ಹೇಳಿಲ್ಲ. ಅದು ಪ್ರೇಕ್ಷಕರ ಡಿಮ್ಯಾಂಡ್​ ಮೇರೆಗೆ ಥಿಯೇಟರ್​ಗಳಲ್ಲಿ ಮಾಲೀಕರು ಸಿಸಿಮಾ ಬದಲಾವಣೆ ಮಾಡುತ್ತಾರೆ. ದಿ ಕಾಶ್ಮೀರ್​ ಫೈಲ್ಸ್ ಸಿನೆಮಾವನ್ನು ಮೊದಲ 3 ದಿನ ಯಾರೂ ನೋಡಲಿಲ್ಲ ಅನ್ನಿಸುತ್ತದೆ. ಇದೀಗ ಥಿಯೇಟರ್​ಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಂದು ನೋಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಅದು ಜನರ ಅಭಿರುಚಿ. ಜೇಮ್ಸ್ ಸಿನಿಮಾ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ರಾಜಕಾರಣ ಮಾಡುತ್ತಿದ್ದಾರೆ. ಇದು ಒಳ್ಳೆಯದಲ್ಲ ಎಂದು ಹೇಳಿದರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.