ETV Bharat / state

ಮಾಧುಸ್ವಾಮಿ, ಆನಂದ ಸಿಂಗ್ ಅವರಿಗೆ ಯಾವುದೇ ಅಸಮಾಧಾನವಿಲ್ಲ: ಸಚಿವ ಶ್ರೀರಾಮುಲು - Minister B. Sriramalu statement

ಖಾತೆ ಬದಲಾವಣೆಯಾಗಿರುವುದಕ್ಕೆ ಮಾಧುಸ್ವಾಮಿ ಹಾಗೂ ಆನಂದ ಸಿಂಗ್ ಅವರಿಗೆ ಯಾವುದೇ ಅಸಮಾಧಾನವಿಲ್ಲ ಎಂದು ಸಿಎಂ ಮುಂದೆ ಹೇಳಿದ್ದಾರೆ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದರು.

Minister B. Sriramalu statement
ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ
author img

By

Published : Jan 26, 2021, 12:28 PM IST

ಚಿತ್ರದುರ್ಗ: ಖಾತೆ ಬದಲಾವಣೆ ಮಾಡುವಾಗ ಎಲ್ಲರಿಗೂ ಅಸಮಾಧಾನ ಇದ್ದೇ ಇರುತ್ತೆ. ಸಚಿವ ಮಾಧುಸ್ವಾಮಿ ಹಾಗೂ ಆನಂದ ಸಿಂಗ್ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಹಾಗೂ ಆನಂದ ಸಿಂಗ್ ಅವರು ಸಚಿವ ಸ್ಥಾನ ಬದಲಾವಣೆ ಮಾಡಿರುವುದಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಹೇಳಿರುವುದಕ್ಕೆ, ಸಿಎಂ ಅವರನ್ನು ಕರೆದು ಚರ್ಚೆ ಮಾಡಿದ್ದಾರೆ ಎಂದರು.

ಖಾತೆ ಬದಲಾವಣೆಯ ತೀರ್ಮಾನವನ್ನು ಸಿಎಂ ಮಾಡುತ್ತಾರೆ. ಬಿಜೆಪಿಯಲ್ಲಿ ಯಾರಿಗೂ ಅಸಮಾಧಾನವಿಲ್ಲ. ಸಮರ್ಥವಾದ ಸಚಿವ ಸಂಪುಟ ಇದೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ಸಮರ್ಥ ಸಚಿವ ಸಂಪುಟ ರಚನೆ ಮಾಡುವ ವಿಚಾರವಾಗಿ ಕೆಲವರ ಖಾತೆ ಬದಲಾವಣೆ ಮಾಡಲಾಗಿದೆ. ಸಮರ್ಥರಾದವರಿಗೆ ಖಾತೆ ನೀಡುವುದರಿಂದ ದೇಶ ಬದಲಾವಣೆಯಾಗಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.