ಚಿತ್ರದುರ್ಗ: ಲೋಕಸಭಾ ಚುನಾವಣೆ ಬಳಿಕ ಈಶ್ವರಪ್ಪನವರೇ ಸಾಯಬಹುದು. ಎಲ್ಲರ ಸಾವನ್ನು ನಿರ್ಧರಿಸಲು ಈಶ್ವರಪ್ಪ ಏನು ಬ್ರಹ್ಮನಾ..? ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ನೆಗೆದು ಬೀಳ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈಶ್ವರಪ್ಪನವರದ್ದು ನಾಲಿಗೆ ಶುದ್ಧವಾಗಿಲ್ಲ, ಅವರ ನಾಲಿಗೆ ಒಂದು ವೇಳೆ ಶುದ್ಧವಾಗಿದ್ರೆ ಸರಿಯಾಗಿ ಮಾತನಾಡ್ತಾ ಇದ್ರು ಎಂದು ಈಶ್ವರಪ್ಪನವರ ಹೇಳಿಕೆಗೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿರುಗೇಟು ನೀಡಿದರು.
ಈಶ್ವರಪ್ಪನವರು ಹಿರಿಯ ರಾಜಕಾರಣಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿವಳಿಕೆ ಸಹ ನೀಡಿದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಲೆಯಲ್ಲಿ ಮೆದುಳಿಲ್ಲ ಸಗಣಿ ಇದೆ ಎಂಬ ಮತ್ತೊಂದು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯಗೆ ತಲೆ ಇದೆ ಮೆದುಳು ಇದೆ. ಇವೆಲ್ಲ ಇದ್ದಿದ್ದಕ್ಕೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸುಧಿರ್ಘವಾದ ಆಡಳಿತ ನಡೆಸಿದ್ದು ಎಂದು ಪ್ರತ್ಯುತ್ತರ ನೀಡಿದರು.
ಯಡಿಯೂರಪ್ಪ ಹಾಗೂ ಈಶ್ವರಪ್ಪಗೆ ತಲೆ ಇಲ್ಲ, ಮೆದುಳಿಲ್ಲ ಅದಕ್ಕೆ ತಲೆಕೆಟ್ಟ ಮಾತಾಡುತ್ತಾರೆ ಎಂದು ಬಿಜೆಪಿಯವರಿಗೆ ವೆಂಕಟರಮಣಪ್ಪ ಟಾಂಗ್ ನೀಡಿದ್ದಾರೆ.