ETV Bharat / state

ಮೀಸಲು ನೀಡದಿದ್ದರೆ ಕೂಡಲಸಂಗಮ ಮಠಕ್ಕೆ ನೀಡಿದ ಅನುದಾನ ವಾಪಸ್: ಮೃತ್ಯುಂಜಯ ಶ್ರೀ - Massive conference of the Panchamasaali community demanding reservation

ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಪಂಚಮಸಾಲಿ ಸಮುದಾಯದ ಸಮಾವೇಶಕ್ಕೆ ಪಂಚಮಸಾಲಿ ಗುರುಪೀಠದ ಜಯ ಬಸವ ಮೃತ್ಯುಂಜಯ, ಹರಿಹರದ ವಚನಾನಂದ ಸ್ವಾಮೀಜಿಗಳು ಪಾದಯಾತ್ರೆ ಕಾರ್ಯಕ್ರಮ ಚಾಲನೆ ನೀಡಿ‌ ಮೀಸಲಾತಿ ನೀಡಲು ಆಗ್ರಹಿಸಿದ್ದಾರೆ.

Massive conference of the Panchamasaali community demanding reservation
ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದ ಬೃಹತ್​​ ಸಮಾವೇಶ
author img

By

Published : Feb 2, 2021, 10:31 PM IST

ಚಿತ್ರದುರ್ಗ: ಸಿಎಂ ಬಿಎಸ್‌ವೈ ಕೈಕಟ್ಟಿ ಹಾಕಿದಂತೆ ಅನ್ನಿಸುತ್ತಿದೆ. ಫೆಬ್ರುವರಿ 2ರೊಳಗೆ ಬೇಡಿಕೆ ಈಡೇರಿಸುವಂತೆ ಗಡುವು ನೀಡಿದ್ದೆವು. ಆದ್ರೆ, ಇದುವರೆಗೂ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಗುರು ಪೀರಾಧ್ಯಕ್ಷ ಜಯ ಬಸವ ಮೃತ್ಯುಂಜಯ ಶ್ರೀ ಕಳವಳ ವ್ಯಕ್ತಪಡಿಸಿದರು.

ಮೀಸಲಾತಿ ನೀಡದಿದ್ದರೆ ಕೂಡಲಸಂಗಮ ಮಠಕ್ಕೆ ನೀಡಿದ ಅನುದಾನ ವಾಪಸ್

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬೃಹತ್ ಪಾದಯಾತ್ರೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡದಿದ್ದರೆ, ಕೂಡಲಸಂಗಮ ಮಠಕ್ಕೆ ಸರ್ಕಾರ ನೀಡಿದ ಅನುದಾನ ಪತ್ರ ವಾಪಸ್ ನೀಡುತ್ತೇವೆ. ನಾಳೆ ಚಿತ್ರದುರ್ಗ ಡಿಸಿ ಕಚೇರಿ ಮೂಲಕ ಅನುದಾನ ಪತ್ರ ವಾಪಸ್ ನೀಡಲಾಗುವುದು ಎಂದರು.

ಪಂಚಮಸಾಲಿ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಂಚಮಸಾಲಿ ಸಮಾವೇಶ ನಡೆಸಲಾಗಿದೆ. ಗುರುಪೀಠದ ಜಯ ಬಸವ ಮೃತ್ಯುಂಜಯ, ಹರಿಹರದ ವಚನಾನಂದ ಸ್ವಾಮೀಜಿಗಳು ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಪಂಚಮಸಾಲಿ ಸಮಾವೇಶ

ಸಮಾವೇದಲ್ಲಿ ಹಿರಿಯ ನಾಯಕ ಎಚ್.ಕೆ ಪಾಟೀಲ್, ಅರವಿಂದ ಬೆಲ್ಲದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: ಚಿತ್ರದುರ್ಗ ನಗರ ತಲುಪಿದ ಪಂಚಮಸಾಲಿ ಸಮುದಾಯದ ಪಾದಯಾತ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.