ಚಿತ್ರದುರ್ಗ: ಇಂದು ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಮನುಷ್ಯನ ಜೀವಕ್ಕೆ ಕುತ್ತು ತಂದಿರುವ ಕೊರೊನಾದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸಿಯೇ ಸುತ್ತಾಡಬೇಕು ಎನ್ನುವ ಉದ್ದೇಶವನ್ನು ಮಾಸ್ಕ್ ಡೇ ಹೊಂದಿದೆ.
ಇನ್ನೂ ನಗರದ ಸಂಚಾರಿ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ, ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಮಾಸ್ಕ್ ಡೇ ಆಚರಿಸಿದರು.
ಕೊರೊನಾ ಹಾವಳಿ ನಡುವೆ ಮಾಸ್ಕ್ ಧರಿಸದೆ ವಾಹನ ಚಲಾಯಿಸುವವರಿಗೆ ಟ್ರಾಫಿಕ್ ಪೊಲೀಸರು ಮಾಸ್ಕ್ ನೀಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಾಕೀತು ಮಾಡಿದರು. ಇನ್ನೂ, ಇನ್ಸ್‌ಪೆಕ್ಟರ್ ರೇವತಿ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಪುಟ್ಟ ಮಕ್ಕಳಿಗೆ ಮಾಸ್ಕ್ ನೀಡಿ, ಅವರ ಪೋಷಕರಲ್ಲಿ ಮಾಸ್ಕ್ ಕುರಿತು ಜಾಗೃತಿ ಮೂಡಿಸಿದರು.