ETV Bharat / state

ಕೋಟೆನಾಡಿನಲ್ಲಿ ರುಚಿಗೆ ಫೇಮಸ್​ ಈ ಡಾಬಾ... ಸ್ವಾಭಿಮಾನದ ಬದುಕು ಕಟ್ಟಿಕೊಂಡ ಮಂಗಳಮುಖಿಯರು - ಡಾಬಾ

ಕೋಟೆನಾಡು ಚಿತ್ರದುರ್ಗದಲ್ಲಿ ನೆಲೆಸಿರುವ ಮಂಗಳಮುಖಿಯರು ಸ್ವಂತ ಡಾಬಾ ತೆರೆದು ದುಡಿಯುವ ಮೂಲಕ ಸ್ವಾಭಿಮಾನದ ಬದುಕನ್ನ ಕಟ್ಟಿಕೊಂಡಿದ್ದಾರೆ.

ಚಿತ್ರದುರ್ಗದಲ್ಲಿ ನೆಲೆಸಿರುವ ಮಂಗಳಮುಖಿಯರು ನಿರ್ಮಿಸಿರುವ ಡಾಬಾ
author img

By

Published : Mar 10, 2019, 3:18 PM IST

ಚಿತ್ರದುರ್ಗ: ಸಮಾಜದಲ್ಲಿ ತೃತೀಯ ಲಿಂಗಿಗಳು ಅಥವಾ ಲೈಂಗಿಕ ಅತೃಪ್ತತರು ಎಂದು ಕರೆಯಲ್ಪಡುವ ಮಂಗಳಮುಖಿಯರೆಂದರೆ ಸಾಕು ಜನಸಾಮಾನ್ಯರಿಗೆ ತೊಂದರೆ ಕೊಡುತ್ತ ಭಿಕ್ಷಾಟನೆಮಾಡಿ, ಹೆದರಿಸಿ ಬೆದರಿಸಿ ಹಣಕೀಳುವ ಜನ ಎಂಬ ತಪ್ಪು ಕಲ್ಪನೆ ಜನಜನಿತವಾಗಿದೆ. ಆದರೆ ಇಲ್ಲೊಂದು ಗುಂಪು ಇದಕ್ಕೆ ತದ್ವಿರುದ್ಧ ಎಂಬತೆ ನಾವು ಕೂಡಾ ಸ್ವಾಭಿಮಾನದ ಬಾಳು ನಡೆಸಬಲ್ಲೆವು ಎಂದು ತೊರಿಸಿಕೊಟ್ಟು ಎಲ್ಲರಿಗೆ ಮಾದರಿಯಾಗಿದ್ದಾರೆ.

ನಾನಾ ದೇಶಗಳಲ್ಲಿ ಜನಸಮಾನ್ಯರಂತೆ ಜೀವನ ನಡೆಸುವ ತೃತೀಯ ಲಿಂಗಿಗಳ ಜೀವನ ಭಾರತದಲ್ಲಿ ಕೊಂಚ ವಿಭಿನ್ನ, ಕೆಲವರು ಅವರನ್ನ ಕೀಳಾಗಿ ಕಂಡರೆ, ಇನ್ನೂ ಕೆಲವರು ಅವರನ್ನ ದೇವರ ಸ್ವರೂಪವಾಗಿ ನೋಡುತ್ತಾರೆ, ಅವರ ಕುರಿತು ಅನೇಕ ದಂತ ಕತೆಗಳು ಸೇರಿದಂತೆ ಹಲವಾರು ವಿಸ್ಮಯಕಾರಿ ಸಂಗತಿಗಳು ಸಮಾಜದಲ್ಲಿ ಹರಿದಾಡುತ್ತಿವೆ. ಅವರಲ್ಲಿ ಕೆಲವರು ದೌರ್ಜನ್ಯದಿಂದ ಹಣ ಕಿತ್ತರೆ ಇನ್ನೂ ಕೆಲವರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ.

ಕೋಟೆನಾಡು ಚಿತ್ರದುರ್ಗದಲ್ಲಿ ನೆಲೆಸಿರುವ ಮಂಗಳಮುಖಿಯರ ಸ್ವಲ್ಪ ಡಿರ್ಫೆಂಟ್. ತಮ್ಮದೆ ಸ್ವಂತ ಡಾಬಾ ತೆರೆದು ದುಡಿಯುವ ಮೂಲಕ ಸ್ವಾಭಿಮಾನದ ಬದುಕನ್ನ ಕಟ್ಟಿಕೊಂಡಿದ್ದಾರೆ. ಭಿಕ್ಷಾಟನೆ ಬದಿಗಿಟ್ಟು 8 ವರ್ಷಗಳಿಂದ ಡಾಬಾ ನಡೆಸಿಕೊಂಡು ಬಂದಿದ್ದು, ಸುತ್ತಮುತ್ತಲಿನ ಹೋಟೆಲ್ ಗಳಿಂತ ಇವರ ಡಾಬಾವೇ ಫೇಮಸ್.

ಚಿತ್ರದುರ್ಗದಿಂದ ಸುಮಾರು ನಾಲ್ಕು ಕಿ.ಮೀ ದೂರದಲ್ಲಿ ರಾಷ್ಟ್ರಿಯ ಹೆದ್ದಾರಿ ಬಳಿಯಿರುವ ಸತಾರ ಡಾಬಾವನ್ನು ಎಂಟು ವರ್ಷದಿಂದ ಮಂಗಳಮುಖಿಯರೇ ನಡೆಸಿಕೊಂಡು ಬರುತ್ತಿದ್ದಾರೆ. ಸ್ವತಃ ತಾವೆ ಅಡುಗೆಯನ್ನ ತಯಾರಿಸುತ್ತಾರೆ. ರುಚಿಕರ ಅಡುಗೆಗೆ ಈ ಡಾಬಾ ತುಂಬಾ ಜನಪ್ರಿಯವಾಗಿದೆಯಂತೆ. ದಿನನಿತ್ಯ ಅದೆಷ್ಟೋ ಲಾರಿ ಚಾಲಕರು ಹಾಗು ಪ್ರಯಾಣಿಕರು ಇಲ್ಲಿ ದೊರೆಯುವ ಆಹಾರ ಸೇವಿಸಿಯೇ ಮುಂದೆ ಸಾಗ್ತಾರಂತೆ.

ಸ್ವಾವಲಂಬಿ ಜೀವನ ನಡೆಸುವುದು ನನ್ನ ಆಸೆಯಾಗಿತ್ತು, ಡಾಬಾ ಹಾಕಲು ಬ್ಯಾಂಕ್ ವೊಂದರಲ್ಲಿ ಸಾಲ ಕೇಳಿದ್ದಕ್ಕೆ ಹೀಯಾಳಿಸಿ ಅವಮಾನ ಮಾಡಿದ್ದರು, ನಾನು ಅದನ್ನೆ ಸವಾಲಾಗಿ ಸ್ವೀಕರಿಸಿದ್ದೆ. ನಿವೇಶನ ಅಡವಿಟ್ಟು ಡಾಬಾ ಅಭಿವೃದ್ಧಿ ಪಡಿಸಿದೆ, ಸದ್ಯ ದಿನಕ್ಕೆ 5 ರಿಂದ 6 ಸಾವಿರ ವಹಿವಾಟು ನಡೆಯುತ್ತಿದೆ ಎಂದು ಡಾಬಾದ ಮುಖ್ಯಸ್ಥೆ ಭಾವನಾ ತಮ್ಮ ಅನುಭವ ಹಂಚಿಕೊಂಡರು.

ಇನ್ನೊಂದು ವಿಶೇಷ ಸಂಗತಿ ಎಂದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಶುದ್ಧ ಕುಡಿಯುವ ನೀರಿನ ಘಟಕ ಕೂಡ ತೆರೆದಿದ್ದು, ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗುತ್ತಿದೆ.

ಸಮಾಜದಲ್ಲಿ ತಾವೂ ಒಂದು ಒಳ್ಳೆಯ ಸ್ಥಾನದಲ್ಲಿ ನಿಲ್ಲಬೇಕು ಎಂಬ ಇಂತಹ ಅದೇಷ್ಟೋ ಮಂಗಳಮುಖಿಯರಿಗೆ ಸರ್ಕಾರ ಸೌಲಭ್ಯಗಳನ್ನ ನೀಡಬೇಕು, ಅವರು ಜನಸಾಮಾನ್ಯರಂತೆ ಜೀವನ ನಡೆಸಲು ಬಿಡಬೇಕು ಎಂಬುದು ಇಲ್ಲಿನ ಜನರ ಮಾತು.

Intro:Body:

1 KN_CTD_080319_SPECIAL_MANGALA_MUKHI_PKG.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.