ETV Bharat / state

ಮಹಾರಾಷ್ಟ್ರ ಕ್ಯಾತೆ ವಿಚಾರ: ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಆಕ್ರೋಶ

ಗಡಿಗೆ ಸಂಬಂಧಿಸಿದಂತೆ ಪದೇ ಪದೆ ಕೆಣಕುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶ ಒಗ್ಗಟ್ಟಾಗಿರಲಿ ಎಂದು ಹೋರಾಟ ಮಾಡಬೇಕು. ಈ ರೀತಿ ಸಣ್ಣ ವಿಚಾರಕ್ಕೆ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಮಹಾರಾಷ್ಟ್ರದ ಕೆಲ ಕಿಡಿಗೇಡಿಗಳ ವಿರುದ್ದ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

Thippareddy
ತಿಪ್ಪಾರೆಡ್ಡಿ
author img

By

Published : Nov 18, 2020, 12:30 PM IST

ಚಿತ್ರದುರ್ಗ: ಕರ್ನಾಟಕದ ಗಡಿಯಲ್ಲಿ ಮಹಾರಾಷ್ಟ್ರ ಕ್ಯಾತೆ ವಿಚಾರವಾಗಿ ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಆಕ್ರೋಶ ಹೊರಹಾಕಿದರು.

ಈ ಕುರಿತು ಮಾತನಾಡಿದ ಅವರು, ಗಡಿ ಹಂಚಿಕೆ ಬಹಳ ಹಿಂದೆಯೇ ತೀರ್ಮಾನವಾಗಿದೆ. ಆ ಜಿಲ್ಲೆಗಳು ನಮ್ಮ ರಾಜ್ಯಕ್ಕೆ ಸೇರಿ ಈಗಾಗಲೇ 50 - 60 ವರ್ಷವಾಗಿದೆ. ಕೆಲ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಆ ಭಾಗದ ಜನರನ್ನು ಪ್ರಚೋದನೆ ಮಾಡಿ ಮತ ಗಳಿಸಲು ಜನಪ್ರತಿನಿಧಿಗಳು ಈ ರೀತಿ ಮಾಡುತ್ತಿದ್ದಾರೆ ಎಂದರು.

ಈ ಟಿವಿ ಭಾರತದೊಂದಿಗೆ ಮಾತನಾಡಿದ ಶಾಸಕ ತಿಪ್ಪಾರೆಡ್ಡಿ

ಗಡಿಗೆ ಸಂಬಂಧಿಸಿದಂತೆ ಪದೇ ಪದೆ ಕೆಣಕುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶ ಒಗ್ಗಟ್ಟಾಗಿರಲಿ ಎಂದು ಹೋರಾಟ ಮಾಡಬೇಕು. ಈ ರೀತಿ ಸಣ್ಣ ವಿಚಾರಕ್ಕೆ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಮಹಾರಾಷ್ಟ್ರದ ಕೆಲ ಕಿಡಿಗೇಡಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.