ETV Bharat / state

'ಕುಮಾರಸ್ವಾಮಿ ಹತಾಶರಾಗಿದ್ದಾರೆ, ಇಲ್ಲ ಯಾವುದೋ ಪ್ರಭಾವಕ್ಕೆ ಒಳಗಾಗಿದ್ದಾರೆ' - Congress leader V.S.Ugrappa news

ಹೆಚ್‌ಡಿಕೆ ಅವ್ರ ಹೇಳಿಕೆಗಳನ್ನು ನೋಡಿದ್ರೆ ಯಾವುದೋ ಪ್ರಭಾವಕ್ಕೆ ಒಳಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಅನಿಸುತ್ತದೆ. ಇಲ್ಲವೇ ಅವರು ಹತಾಶರಾಗಿ ಈ ರೀತಿ ಮಾತನಾಡುತ್ತಿರಬೇಕು ಎಂದು ಕಾಂಗ್ರೆಸ್​ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ವಿ.ಎಸ್. ಉಗ್ರಪ್ಪ
ವಿ.ಎಸ್. ಉಗ್ರಪ್ಪ
author img

By

Published : Dec 10, 2020, 3:03 PM IST

Updated : Dec 10, 2020, 6:35 PM IST

ಚಿತ್ರದುರ್ಗ: ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹತಾಶರಾಗಿದ್ದಾರೆ. ಇಲ್ಲವೇ ಯಾವುದೋ ಪ್ರಭಾವಕ್ಕೆ ಒಳಗಾಗಿ ಕಾಂಗ್ರೆಸ್​ ಪಕ್ಷದ ವಿರುದ್ಧ ಹೀಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್​ನ ಮುಖಂಡ ವಿ.ಎಸ್. ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ ಮುಖಂಡ ವಿ.ಎಸ್. ಉಗ್ರಪ್ಪ

ನಗರದ ಕಾಂಗ್ರೆಸ್​​ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್‌ಡಿಕೆ ಅವ್ರ ಹೇಳಿಕೆಗಳನ್ನು ನೋಡಿದ್ರೆ ಯಾವುದೋ ಪ್ರಭಾವಕ್ಕೆ ಒಳಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಅನಿಸುತ್ತದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ್ರೆ ಬಿಜೆಪಿ ವಿರುದ್ಧವಾಗಿ, ನಮ್ಮ ಸರ್ಕಾರ ಬೀಳಿಸಲು ಜಿಜೆಪಿ ನಾಯಕರೇ ಕಾರಣ ಎಂದು ಹೇಳಿಕೆ ನೀಡಿ, ಬೈದಿದ್ದರು‌. ಇಂದು ಅವ್ರೇ ಹೇಳ್ತಿದ್ದಾರೆ ಬಿಜೆಪಿಯವರು ಒಳ್ಳೆಯವರು, ಕಾಂಗ್ರೆಸ್ ಸಹವಾಸ ಮಾಡಿ ತಪ್ಪು ಮಾಡಿದೆ ಅಂತ. ಆದ್ರೆ ಕಾಂಗ್ರೆಸ್​ನ 145 ಜನ ಬೆಂಬಲ‌ ನೀಡಿದರ ಫಲವಾಗಿ ಹೆಚ್. ಡಿ. ದೇವೇಗೌಡರು ಪ್ರಧಾನಿಯಾದರು ಎಂದು ಉಗ್ರಪ್ಪ ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ.

ಓದಿ: ಎಸ್‌ಐ ನಡುವೆ ಪ್ರೇಮಾಂಕುರ.. ಕೈ ಕೊಟ್ಟ ಪ್ರಿಯಕರನ ವಿರುದ್ಧ ಲೇಡಿ ಪೊಲೀಸ್​ ದೂರು

ಕುಮಾರಸ್ವಾಮಿ ಮಾತುಗಳನ್ನು ನೋಡಿದ್ರೆ, ಬಿಜೆಪಿ ಅವ್ರು ಒತ್ತಡ ಹೇರುತ್ತಿರುವುದು ಮೇಲ್ನೋಟಕ್ಕೆ ಕಂಡು ಬರ್ತಿದೆ. ನಾವೇ ಬೆಂಬಲ ನೀಡಿ ಅವರನ್ನು ಸಿಎಂ ಮಾಡಿದ್ವಿ. ಇಂದು ಬಿಜೆಪಿಯ ಪರವಾದ ಅವರ ಹೇಳಿಕೆಗಳನ್ನು ನೋಡಿದ್ರೆ, ಕುಮಾರಸ್ವಾಮಿ ಬಿಜೆಪಿಯೊಂದಿಗೆ ಹೊಂದಾಣಿಕೆ‌ ಮಾಡಿಕೊಂಡಿದ್ದಾರೆ ಅನಿಸುತ್ತದೆ. ಇತ್ತ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಅದನ್ನು ಜನ ತೀರ್ಮಾನ ಮಾಡ್ತಾರೆ ಎಂದು ಉಗ್ರಪ್ಪ ಲೇವಡಿ ಮಾಡಿದರು.

Last Updated : Dec 10, 2020, 6:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.