ಚಿತ್ರದುರ್ಗ : ರಾಜ್ಯ ರಾಜಕೀಯ ನಾಯಕರ ದೊಂಬರಾಟ ನೋಡಿ ಬೇಸತ್ತ ಕೋಟೆನಾಡಿನ ರೈತರು ವಿನೂತನ ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘಟನೆ ಕಾರ್ಯಕರ್ತರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಛೀ ಥೂ ಚಳವಳಿಯ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ನಗರದ ಗಾಂಧಿ ವೃತ್ತದಲ್ಲಿ ಅತೃಪ್ತ ಶಾಸಕರ ಹಾಗೂ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮೂರು ಪಕ್ಷಗಳ ಹೆಸರುಗಳಿರುವ ಪ್ರತಿಕೃತಿಗಳಿಗೆ ರೈತರು ಕ್ಯಾಕರಿಸಿ ಉಗುಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.