ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಚೆಕ್ ಡ್ಯಾಮ್ ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗಿದೆ.
ತಾಲೂಕಿನಲ್ಲಿ ಭರಪೂರ ಮಳೆ ಬಿದ್ದರೂ ಚೆಕ್ ಡ್ಯಾಮ್ನಲ್ಲಿ ನೀರು ನಿಲ್ಲದೇ ಇರುವುದು ಈ ಭಾಗದ ರೈತರನ್ನು ಹೈರಾಣಾಗಿಸಿದೆ. ಕೆಲ್ಲೋಡು ಗ್ರಾಮದ ಚೆಕ್ ಡ್ಯಾಮ್ ಕೊಚ್ಚಿಕೊಂಡು ಹೋದ ಬೆನ್ನಲ್ಲೇ ಚಳ್ಳಕೆರೆ ಶಾಸಕ ರಘುಮೂರ್ತಿ ಹಾಗೂ ಹೊಸದುರ್ಗ ಮಾಜಿ ಶಾಸಕ ಗೋವಿದಪ್ಪ ಭೇಟಿ ನೀಡಿ ರೈತರೊಂದಿಗೆ ಮಾಹಿತಿ ಕಲೆ ಹಾ,ಕಿ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.
ಚೆಕ್ ಡ್ಯಾಮ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ವಿವಿ ಸಾಗರದತ್ತ ಮುಖ ಮಾಡಿರುವುದು ಹೊಸದುರ್ಗ ತಾಲೂಕಿನ ರೈತ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ ಕಳೆದ ದಿನ ಕೆಲ್ಲೋಡು ಚೆಕ್ ಡ್ಯಾಮ್ಗೆ ಭೇಟಿ ನೀಡಬೇಕಾಗಿದ್ದ ಉಸ್ತುವಾರಿ ಸಚಿವ ಶ್ರೀ ರಾಮುಲು ಭೇಟಿ ನೀಡದೇ ಇರುವುದು ರೈತರನ್ನು ಕೆರಳಿಸಿದೆ.