ETV Bharat / state

ಇಬ್ಬರು ಅಂತರ್‌ ಜಿಲ್ಲಾ ಬೈಕ್ ಕಳ್ಳರ ಬಂಧನ: 17 ಬೈಕ್​ಗಳು ವಶಕ್ಕೆ - ಇಬ್ಬರು ಅಂತರ್ ಜಿಲ್ಲಾ ಬೈಕ್​ ಕಳ್ಳರ ಬಂಧನ

ಚಳ್ಳಕೆರೆ ಸರ್ಕಲ್ ಇನ್ಸ್​ಪೆಕ್ಟರ್ ರಮಾಕಾಂತ್ ಹಾಗೂ ಪರಶುರಾಮಪುರ ಪಿಎಸ್​ಐ ಸ್ವಾತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ, ಆರೋಪಿಗಳಿಂದ 5 ಲಕ್ಷದ 25 ಸಾವಿರ ರೂ. ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಅಂತರ್‌ ಜಿಲ್ಲಾ ಬೈಕ್ ಕಳ್ಳರ ಬಂಧನ
ಇಬ್ಬರು ಅಂತರ್‌ ಜಿಲ್ಲಾ ಬೈಕ್ ಕಳ್ಳರ ಬಂಧನ
author img

By

Published : Feb 10, 2022, 8:26 AM IST

ಚಿತ್ರದುರ್ಗ: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಪರಶುರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲ್ಯಾಣದುರ್ಗ ಜಿಲ್ಲೆಯ ಅಡವಿಗೊಲ್ಲಪಲ್ಲಿಯ ಹೊನ್ನಪ್ಪ (41), ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾಥಪನಗುಡಿ ಗ್ರಾಮದ ವಿರೂಪಾಕ್ಷ (31) ಬಂಧಿತರು.

ಪರಶುರಾಮಪುರ ಠಾಣೆಯಲ್ಲಿ 2, ಚಿತ್ರದುರ್ಗ ಬಡಾವಣೆ 2, ಕೋಟೆ ಠಾಣೆ, ಹಿರಿಯೂರು ನಗರ, ಚಳ್ಳಕೆರೆ ಠಾಣೆ, ವಿಜಯನಗರ ಜಿಲ್ಲೆಯ ಕೊಡ್ಲಗಿ ಪೊಲೀಸ್ ಠಾಣೆ, ದಾವಣಗೆರೆ ಬಡಾವಣೆ, ಜಗಳೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ 5 ಲಕ್ಷದ 25 ಸಾವಿರ ರೂ. ಮೌಲ್ಯದ 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಬಂಧಪಟ್ಟ ಬೈಕ್ ವಾರಸುದಾರರು ಸೂಕ್ತ ದಾಖಲೆಗಳನ್ನು ನೀಡಿ ವಾಹನಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಚಿತ್ರದುರ್ಗ ಎಸ್​ಪಿ ಪರುಶುರಾಮ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.