ETV Bharat / state

ಕೋಟೆನಾಡಿನಲ್ಲಿ ಮಿತಿ ಮೀರಿದ ಇಸ್ಪೀಟ್ ದಂಧೆ.. ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠರು ಹೀಗಂತಾರೆ.. - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ

ಪ್ರಭಾವಿ ವ್ಯಕ್ತಿಯೋರ್ವ ತಾನು ಪೂರ್ವವಲಯ ಐಜಿಪಿ ಎಸ್.ರವಿ ಅವರ ಆಪ್ತ ಎಂದು ಹೇಳಿಕೊಂಡು, ನಾನು ನೋಡಿಕೊಳ್ಳುತ್ತೇನೆ, ನೀವು ತಲೆ ಕೆಡಿಸಿಕೊಳ್ಳಬೇಡಿ ಅಂತಾ ಡಿವೈಎಸ್ಪಿ, ಸಿಪಿಐಗಳ ಬಳಿ ವ್ಯವಹಾರ ಕುದುರಿಸಿಕೊಂಡು ದಂಧೆ ನಡೆಸುತ್ತಿದ್ದಾನೆ ಎನ್ನಲಾಗುತ್ತಿದೆ..

ಕೋಟೆನಾಡಿನಲ್ಲಿ ಮಿತಿ ಮೀರಿದ ಇಸ್ಪೀಟ್ ದಂಧೆ
ಕೋಟೆನಾಡಿನಲ್ಲಿ ಮಿತಿ ಮೀರಿದ ಇಸ್ಪೀಟ್ ದಂಧೆ
author img

By

Published : Aug 25, 2021, 7:47 PM IST

ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇಸ್ಪೀಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಕಣ್ಣಿದ್ದೂ ಕುರುಡಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇಲಾಖೆಯ ಹಿರಿಯ ಅಧಿಕಾರಿಗಳೇ ಶಾಮೀಲಾಗಿ ದಂಧೆ ನಡೆಯೋಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಕೋಟೆನಾಡಿನಲ್ಲಿ ಮಿತಿ ಮೀರಿದ ಇಸ್ಪೀಟ್ ದಂಧೆ

ಜಿಲ್ಲೆಯ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ತಾಲೂಕಿನ ಗ್ರಾಮಾಂತರ ಭಾಗದ ಬಯಲು ಪ್ರದೇಶದಲ್ಲಿ ರಾಜಾರೋಷವಾಗಿ ಯಾರ ಭಯವೂ ಇಲ್ಲದೆ ನಿತ್ಯ ಲಕ್ಷಾಂತರ ರೂಪಾಯಿ ಜೂಜಾಟ ನಡೆಯುತ್ತಿದೆ. ಜೂಜಾಟಕ್ಕೆ ಬ್ರೇಕ್ ಹಾಕಬೇಕಿದ್ದ ಪೊಲೀಸ್ ಅಧಿಕಾರಿಗಳೇ ಶಾಮೀಲಾಗಿ ತಿಂಗಳಿಗಿಷ್ಟು ಅಂತಾ ಫಿಕ್ಸ್ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪ್ರಭಾವಿ ವ್ಯಕ್ತಿಯೋರ್ವ ತಾನು ಪೂರ್ವವಲಯ ಐಜಿಪಿ ಎಸ್.ರವಿ ಅವರ ಆಪ್ತ ಎಂದು ಹೇಳಿಕೊಂಡು, ನಾನು ನೋಡಿಕೊಳ್ಳುತ್ತೇನೆ, ನೀವು ತಲೆ ಕೆಡಿಸಿಕೊಳ್ಳಬೇಡಿ ಅಂತಾ ಡಿವೈಎಸ್ಪಿ, ಸಿಪಿಐಗಳ ಬಳಿ ವ್ಯವಹಾರ ಕುದುರಿಸಿಕೊಂಡು ದಂಧೆ ನಡೆಸುತ್ತಿದ್ದಾನೆ ಎನ್ನಲಾಗುತ್ತಿದೆ.

ಜೂಜಾಡುತ್ತಿರುವ ವಿಡಿಯೋ ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಗ್ರಾಮೀಣ ಭಾಗದಲ್ಲಿ ಅದರಲ್ಲೂ ಬೇರೆ ಜಿಲ್ಲೆಗೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಜೂಜಾಡುತ್ತಿರುವುದು ಗಮನಕ್ಕೆ ಬಂದಿದೆ.‌ ವಿಡಿಯೋದಲ್ಲಿ‌ ಸ್ಪಷ್ಟವಾಗಿ ಕಾಣುತ್ತಿದ್ದು, ಅದರ ತನಿಖೆಗೆ ತಂಡವೊಂದನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮೈಸೂರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ.. ಆರೋಪಿಗಳ ಬಂಧನಕ್ಕೆ ಸಿಎಂ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.