ಚಿತ್ರದುರ್ಗ:ಲೋಕಸಮರಕ್ಕೆ ಸಿದ್ಧನಿದ್ದೇನೆ. ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲ ನೀಡುವುದು ಖಚಿತವಾಗಿದೆ. ಇದರ ಸಂಬಂಧ ದೇವೇಗೌಡರೊಂದಿಗೆ ಮಾತನಾಡಲಾಗಿದೆ. ಅವರೂ ಕೂಡ ಬೆಂಬಲಿಸುವಂತೆ ಆದೇಶಿಸಿದ್ದಾರೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಹೇಳಿದರು.
ಖಾಸಗಿ ಹೋಟೆಲ್ನಲ್ಲಿಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಮಾಜಿ ಶಾಸಕರು ಹಾಗೂ ಸಚಿವರು ನನಗೆ ಸಹಕಾರ ನೀಡುತ್ತಾರೆ. ಇಲ್ಲಿರುವ ಮಾಜಿ ಹಾಲಿ ಶಾಸಕರು ಒಂದೇ ಕುಟುಂಬದಂತೆ ಇದ್ದೇವೆ ಎಂದ ಅವರು, ಬಿಜೆಪಿಯವರು ಬೇರೆ ಜಾತಿಯವರಮತಗಳು ಬೇಡ ಅಂತಾರೆ. ಅದರೆ, ನಮಗೆ ಎಲ್ಲಾ ಮತಗಳಮತಬೇಕು ಎಂದು ಬಿಜೆಪಿಗೆ ಟಾಂಗ್ ನೀಡಿದರು.
ನಾನು ಹೊಸದಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಅದ್ದರಿಂದ ನನಗೆ ಆತಂಕ ಇಲ್ಲ. ಧೈರ್ಯವಾಗಿ ಚುನಾವಣೆ ಎದುರಿಸುತ್ತೇನೆ. ಜಿಲ್ಲೆಯಮಠಾಧೀಶರು ಸಾಥ್ ನೀಡಲಿದ್ದಾರೆ. ಅದೇ ನನಗೆ ಶಕ್ತಿ.ಕಾಂಗ್ರೆಸ್ ಅಂದ್ರೆ ಹಿಂದೂಗಳು ಹಿಂದೂಗಳೆಂದರೆ ಕಾಂಗ್ರೆಸ್. ಅದರೆ, ಬಿಜೆಪಿಗರಂತೆ ಒಂದೆ ಸಮುದಾವನ್ನು ಓಲೈಕೆ ಮಾಡುವುದಿಲ್ಲ ಎಂದು ಬಿಜೆಪಿ ವಿರುದ್ಧಹರಿಹಾಯ್ದರು.