ETV Bharat / state

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಲಂಗೋಟಿ ಜನ ಬಿಚ್ಚಿ‌ ಕಳಿಸ್ತಾರೆ: ಆರಗ ಜ್ಞಾನೇಂದ್ರ - Karnataka chaddi statement

ಕಾಂಗ್ರೆಸ್ ಇಷ್ಟು ದಿನ ಆಡಳಿತ ನಡೆಸಿದೆ. ಆದರೆ, ಅವರಿಗೆ ಹೊಣೆಗಾರಿಕೆ ಮರೆತು ಹೋಗಿದೆ. ಕೈ ನಾಯಕರು ಮನಸೋ ಇಚ್ಛೆ ಮಾತಾಡುತ್ತಿದ್ದಾರೆ. ಈಗಾಗಲೇ ಇಡೀ ದೇಶದಲ್ಲಿ ಕಾಂಗ್ರೆಸ್ ಚಡ್ಡಿ ಬಿಚ್ಚಿ ಕಳುಹಿಸಿದ್ದಾರೆ. ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಲಂಗೋಟಿಯನ್ನೂ ಬಿಚ್ಚಿ‌ ಕಳುಹಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
author img

By

Published : Jun 9, 2022, 10:45 AM IST

ಚಿತ್ರದುರ್ಗ: ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸಗಳಿಲ್ಲ, ಮನಸೋ ಇಚ್ಛೆ ಮಾತಾಡುತ್ತಿದ್ದಾರೆ. ಈಗಾಗಲೇ ಇಡೀ ದೇಶದಲ್ಲಿ ಕಾಂಗ್ರೆಸ್ ಚಡ್ಡಿ ಬಿಚ್ಚಿ ಕಳುಹಿಸಿದ್ದಾರೆ. ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಲಂಗೋಟಿಯನ್ನ ಬಿಚ್ಚಿ‌ ಕಳಿಸಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದರು.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇಷ್ಟು ದಿನ ಆಡಳಿತ ನಡೆಸಿದೆ. ಆದರೆ, ಅವರಿಗೆ ಹೊಣೆಗಾರಿಕೆ ಮರೆತು ಹೋಗಿದೆ. ಕೈ ನಾಯಕರು ಮನಸೋ ಇಚ್ಛೆ ಮಾತಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಚಿತ್ರದುರ್ಗದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರನ್ನೋ ದುರ್ಬಳಕೆ ಮಾಡಿಕೊಂಡು ಸರ್ಕಾರ ನಡೆಸುವ ದರಿದ್ರತನ ನಮಗೆ ಇಲ್ಲ. ಸರ್ಕಾರ ನೀತಿ ನಿಯಮದ ಪ್ರಕಾರ ಬೊಮ್ಮಾಯಿ ನೇತೃತ್ವದಲ್ಲಿ, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದರು.

ಕಾಂಗ್ರೆಸ್, ಜೆಡಿಎಸ್​ನವರು ಯಾವಾಗ ಜೊತೆಯಾಗುತ್ತಾರೆ, ಯಾವಾಗ ಬೇರೆ ಆಗುತ್ತಾರೋ‌ ಗೊತ್ತಿಲ್ಲ. ಅವರು ಆಫರ್ ಕೊಟ್ಟರೆ ಇವರು ತಿರಸ್ಕಾರ ಮಾಡೋದು, ಸ್ವೀಕಾರ ಮಾಡುವುದು ಅವರಿಬ್ಬರಿಗೆ ಬಿಟ್ಟ ವಿಚಾರ. ಇವರಿಬ್ಬರ ಜಗಳದ ನಡುವೆ ನಾವಂತೂ ಸೇಫ್ ಆಗಿದ್ದೇವೆ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿಗಾಗಿ ಬಿಎಸ್​ವೈ ಆಡಳಿತದಲ್ಲಿ ಸಾಲ ಆಗಿರಬಹುದು. ಆದರೆ, ಈಗಿನ ಸರ್ಕಾರ ಸಾಲ ತೀರಿಸುತ್ತದೆ. ರಾಜ್ಯದ ಏಳಿಗೆಗೆ ಏನು ಮಾಡಬೇಕೋ ಅದನ್ನು ಬಿಎಸ್​ವೈ ಮಾಡಿದ್ದಾರೆ. ಈ ರೀತಿ ಲಘುವಾಗಿ ಯಾರನ್ನು ಟೀಕಿಸಬಾರದು. ಯಾಕೆ ಸಿದ್ದರಾಮಯ್ಯ ಕಾಲದಲ್ಲಿ ಸಾಲ ಮಾಡಿಲ್ಲವೇ?, ದೇವಲೋಕವನ್ನೇ ಇಳಿಸಿದಂತೆ ಸಿದ್ದರಾಮಯ್ಯ ಮಾತನಾಡ್ತಾರೆ. ಸಿದ್ದರಾಮಯ್ಯ ಆಡಳಿತದಲ್ಲೂ ಗುತ್ತಿಗೆದಾರರಿಗೆ ಬಿಲ್ ಕೊಡದೇ ಸತಾಯಿಸಿದ್ದನ್ನ ಜನ ಮರೆತಿಲ್ಲ ಎಂದರು.

ಇದನ್ನೂ ಓದಿ: ಬಿರು ಬಿಸಿಲಿನ ನಡುವೆ ಕೇವಲ10 ಅಡಿ ವ್ಯಾಪ್ತಿಯಲ್ಲಿ ಬೀಳುತ್ತೆ ಮಳೆ: ಗ್ರಾಮಸ್ಥರಲ್ಲಿ ದಿಗ್ಬ್ರಮೆ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.