ETV Bharat / state

ರಿಜಿಸ್ಟ್ರೇಷನ್​​ ಇಲ್ಲದೆ ತುಕ್ಕು ಹಿಡಿಯುತ್ತಿವೆ ಹೊಳಲ್ಕೆರೆ ಪಟ್ಟಣ ಪಂಚಾಯ್ತಿಯ ವಾಹನಗಳು!

ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಲ್ಲಿರುವ ವಾಹನಗಳಿಗೆ ನೋಂದಣಿಯಾಗದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿಯುತ್ತಿದ್ದು, ಇನ್ನೂ ಕೆಲವು ಆರ್​ಟಿಒ ರಿಜಿಸ್ಟೇಷನ್ ನಂಬರ್ ಇಲ್ಲದೆ ಅನಾಥವಾಗಿ ಪಂಚಾಯತ್ ಆವರಣದಲ್ಲಿ ನಿಂತಿರುವ ದೃಶ್ಯ ಕಾಣಸಿಗುತ್ತದೆ.

author img

By

Published : May 11, 2019, 5:40 PM IST

ತುಕ್ಕು ಹಿಡಿದು ನಿಂತಿರುವ ವಾಹನಗಳು

ಚಿತ್ರದುರ್ಗ: ಯಾವುದೇ ವಾಹನಗಳು ರೋಡಿಗೆ ಇಳಿಯಬೇಕಾದರೆ ಆರ್​ಟಿಒನಲ್ಲಿ ರಿಜಿಸ್ಟರ್ ಆಗಿರಲೇಬೇಕು. ಆದರೆ ಜಿಲ್ಲೆಯ ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಮಾತ್ರ ನಿಯಮ ಗಾಳಿಗೆ ತೂರಿದೆ ಎನ್ನಲಾಗಿದ್ದು, ಪಂಚಾಯಿತಿಗೆ ಸೇರಿದ ವಾಹನಗಳಿಗೆ ನೋಂದಣಿ ಭಾಗ್ಯ ಕಾಣದೆ ತುಕ್ಕು ಹಿಡಿಯುತ್ತಿವೆ. ಇದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chitradurga
ತುಕ್ಕು ಹಿಡಿದು ನಿಂತಿರುವ ವಾಹನಗಳು

ಹೊಳಲ್ಕೆರೆ ಪಟ್ಟಣ ಪಂಚಾಯಿತಿಯಲ್ಲಿರುವ ವಾಹನಗಳಿಗೆ ನೋಂದಣಿಯಾಗದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿಯುತ್ತಿದ್ದು, ಇನ್ನೂ ಕೆಲವು ಆರ್​ಟಿಒ ರಿಜಿಸ್ಟೇಷನ್ ನಂಬರ್ ಇಲ್ಲದೆ ಅನಾಥವಾಗಿ ಪಂಚಾಯತ್ ಆವರಣದಲ್ಲಿ ನಿಂತಿರುವ ದೃಶ್ಯ ಕಾಣಸಿಗುತ್ತದೆ. ಟ್ರ್ಯಾಕ್ಟರ್, ಆಟೋ, ಜೀಪುಗಳನ್ನು ಖರೀದಿಸಿ ಸುಮಾರು ಹತ್ತು ವರ್ಷಗಳೇ ಕಳೆದಿದ್ದು, ‌ಅವುಗಳನ್ನ ರಿಜಿಸ್ಟ್ರೇಷನ್ ಮಾಡಿಸಿಲ್ಲ. ಯಾವುದೇ ನಂಬರ್ ಹಾಕದೆ ಅಧಿಕಾರಿಗಳು ವಾಹನಗಳನ್ನು ಉಪಯೋಗಿಸಿದ್ದು, ವಾಹನಗಳೆಲ್ಲ ತುಕ್ಕು ಹಿಡಿದು ಹಾಳಾಗುತ್ತಿವೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ತುಕ್ಕು ಹಿಡಿದು ನಿಂತಿರುವ ವಾಹನಗಳು

ರಿಜಿಸ್ಟ್ರೇಷನ್ ಮಾಡಿಸದೆ ಬಳಕೆ ಮಾಡಿರೋ ಸುಮಾರು ಹತ್ತಕ್ಕೂ ಹೆಚ್ಚು ವಾಹನಗಳು ಇದೀಗ ಅನುಪಯುಕ್ತವಾಗಿ ನಿಂತಿವೆ. ಈ ವಾಹನಗಳಿಗೆ ಚಾಲಕರೂ ಇಲ್ಲ. ಹೀಗಾಗಿ ಸರ್ಕಾರದ ಹಣವನ್ನ ಈ ಹಿಂದೆ ಪಟ್ಟಣ ಪಂಚಾಯತ್​ ಅಧಿಕಾರಿಯೊಬ್ಬರು ಲೂಟಿ ಹೊಡೆದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಅವರಿಂದಲೇ ಸರ್ಕಾರಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡುವಂತೆ ಪಂಚಾಯತಿಯ ಮಾಜಿ ಸದಸ್ಯ ಒತ್ತಾಯಿಸಿದ್ದಾರೆ.

Intro:ಹೊಳಲ್ಕೆರೆ ಪಟ್ಟಣ ಪಂಚಾಯತಿಗೆ ಸೇರಿದ ವಾಹನಗಳಿಗೆ ಆಗಬೇಕಾಗಿದೆ ರಿಜಿಸ್ಟ್ರೇಷನ್

ಆಂಕರ್: - ಯಾವುದೇ ವಾಹನಗಳು ರೋಡಿಗಿಳಿಬೇಕೆಂದ್ರೇ ಆರ್ ಟಿಒನಲ್ಲಿ ರಿಜಿಸ್ಟರ್ ಆಗಿರಲೇಬೇಕು, ಇಲ್ಲಾ ಅಂದ್ರೆ ಆ ವಾಹನದ ಮಾಲೀಕರು ಯಾರೇ ಆದ್ರೂ ದಂಡ ತೆರಲೇಬೇಕಾಗುತ್ತದೆ. ಆದ್ರೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣಪಂಚಾಯಿತಿ ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಪಟ್ಟಣಪಂಚಾಯಿತಿಗೆ ಸೇರಿದ ವಾಹನಗಳಿಗೆ ನೊಂದಣಿ ಮಾಡಿಸದೆ ಹಾಗೇ ತುಕ್ಕು ಹಿಡಿಯುತ್ತಿವೆ.

ಲುಕ್,,,,

ಫ್ಲೋ,,,,,

ವಾಯ್ಸ್01: - ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣ ಪಂಚಾಯಿತಿಯ ದುರವಸ್ಥೆ ಇದು. ಪಂಚಾಯಿತಿಯಡಿಯಲ್ಲಿ ಬರುವ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳು ತುಕ್ಕು ಹಿಡಿಯುತ್ತಿವೆ. ಇನ್ನೂ ಕೆಲವು ಆರ್ ಟಿಒ ರಿಜಿಸ್ಟೇಷನ್ ನಂಬರ್ ಇಲ್ಲದೆ ವಾಹನಗಳು ಅನಾಥವಾಗಿ ಪಂಚಾಯತ್ ಆವರಣದಲ್ಲಿ ನಿಂತಿರುವ ದೃಶ್ಯ ಕಾಣಸಿಗುತ್ತದೆ. ಟ್ರಾಕ್ಟರ್, ಅಟೋ, ಜೀಪುಗಳು. ವಾಹನಗಳನ್ನು ಖರೀದಿಸಿ ಸುಮಾರು ಹತ್ತು ವರ್ಷಗಳೇ ಕಳೆದಿದ್ರೂ, ‌ಅವುಗಳನ್ನ ರಿಜಿಸ್ಟ್ರೇಷನ್ ಮಾಡಿಸಿಲ್ಲ, ವಾಹನಗಳಿಗೆ ಯಾವುದೇ ನಂಬರ್ ಹಾಕದೇ ಇದ್ರೂ ಕೆಲವು ವರ್ಷಗಳ ಕಾಲ ಉಪಯೋಗಿಸಿರುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಇದೀಗ ಸುಮ್ಮನೆ ನಿಲ್ಲಿಸಿರೋದ್ರಿಂದ ಅವೆಲ್ಲಾ ತುಕ್ಕು ಹಿಡಿದು ಹಾಳಾಗುತ್ತಿವೆ.

ಬೈಟ್01: - ಖಾದರ್, ಸ್ಥಳೀಯರು, ಹೊಳಲ್ಕೆರೆ.

ವಾಯ್ಸ್02:- ಹೀಗೆ ರಿಜಿಸ್ಟ್ರೇಷನ್ ಮಾಡಿಸದ ಬಳಕೆ ಮಾಡಿರೋ ಸುಮಾರು ಹತ್ತಕ್ಕೂ ಹೆಚ್ಚು ವಾಹನಗಳು ಇದೀಗ ಅನುಪಯುಕ್ತವಾಗಿ ನಿಂತಿದ್ದು, ತುಕ್ಕು ಹಿಡಿದು ಹಾಳಾಗುತ್ತಿವೆ, ಹತ್ತು ವರ್ಷಗಳ ಹಿಂದೆಯೇ ಸುಮಾರು 50ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿದ ವಾಹನಗಳನ್ನ ಆರ್ಟಿಒನಲ್ಲಿ ನೊಂದಣಿ ಕೂಡ ಮಾಡಿಸಿಲ್ಲ, ಅಲ್ಲದೇ ಈ ವಾಹನಗಳಿಗೆ ಚಾಲಕರೂ ಇಲ್ಲ, ಹೀಗಾಗಿ ಸರ್ಕಾರದ ಹಣವನ್ನ ಈ ಹಿಂದೆ ಪಟ್ಟಣ ಪಂಚಾಯ್ತಿ ಅಧಿಕಾರಿಯಾಗಿದ್ದ ಚಂದ್ರಪ್ಪ ಲೂಟಿ ಹೊಡೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಅವರಿಂದಲೇ ಸರ್ಕಾರಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡುವಂತೆ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯರೊಬ್ಬರು ಒತ್ತಾಯಿಸಿದ್ದಾರೆ..

ಬೈಟ್02:- ಶೌಕತ್ ಆಲಿ, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ, ಹೊಳಲ್ಕೆರೆ.

ವಾಯ್ಸ್ 03:- ಒಟ್ಟಾರೆ ನಗರ ಪ್ರದೇಶಕ್ಕೆ ಒಳ್ಳೆದಾಗಲೆಂದು ಬಯಸಿ ಸರ್ಕಾರ ಮಾತ್ರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಖರೀದಿ ಮಾಡಿ ವಾಹನಗಳನ್ನು ನೀಡಿದೆ. ಇತ್ತ ಪಟ್ಟಣ ಪಂಚಾಯತ್ ಮಾತ್ರ ವಾಹನಗಳನ್ನು ಉಪಯೋಗಿಸದೆ, ಆರ್ಟಿಒ ರಿಜಿಸ್ಟ್ರೇಷನ್ ಮಾಡಿಸದೆ ತುಕ್ಕು ಹಿಡಿಯುತ್ತಿವೆ. ಇಷ್ಟಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಕೈಕಟ್ಟಿಕೂತಿರುವುದು ದುರಂತವೆ ಸರಿ.

ಡಿ ನೂರುಲ್ಲಾ ಈಟಿವಿ ಭಾರತ್ ಚಿತ್ರದುರ್ಗ...Body:ನೊConclusion:ರಿಜಿಸ್ಟ್ರೆಷನ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.