ETV Bharat / state

ಸುಪ್ರೀಂ ಒಳ ಮೀಸಲಾತಿ ಅಭಿಪ್ರಾಯದಿಂದ ಯಾರಿಗೂ ತೊಂದರೆ ಇಲ್ಲ.. ಕೈ-ಕಮಲ ನಾಯಕರು

author img

By

Published : Sep 2, 2020, 9:29 PM IST

ಮೀಸಲಾತಿಯಲ್ಲಿ ಎಲ್ಲರಿಗೂ ಸಮಾನ ಮೀಸಲಾತಿ ನೀಡ್ಬೇಕು. ಶೇ.6%ರಷ್ಟು ಮಾದಿಗ, ಶೇ.5ರಷ್ಟು ಬಲಗೈ, ಇನ್ನು ಶೇ.3ರಷ್ಟು ಭೋವಿ, ಲಂಬಾಣಿ ಸೇರಿ ಇತರ ಸಮುದಾಯಗಳಿಗೂ ಮೀಸಲಾತಿ ಸಿಗುತ್ತದೆ ಹೊರತು, ಯಾವುದೇ ಜಾತಿಯವರಿಗೆ ಅನ್ಯಾಯ ಆಗಿಲ್ಲ..

h anjaneya narayana swamy pressmeet
ಮೀಸಲಾತಿಯಲ್ಲಿ ಒಳಮೀಸಲಾತಿ ಇರುವುದು ಅತ್ಯವಶ್ಯಕ

ಚಿತ್ರದುರ್ಗ: ಮೀಸಲಾತಿಯಲ್ಲಿ ಒಳಮೀಸಲಾತಿ ಇರುವುದು ಅತ್ಯವಶ್ಯಕ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ ಏಳು ನ್ಯಾಯಾಧೀಶರ ಪೀಠ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿರುವುದನ್ನು ಮಾಜಿ ಸಚಿವ ಹೆಚ್ ಆಂಜನೇಯ ಹಾಗೂ ಹಾಲಿ ಬಿಜೆಪಿ ಸಂಸದ ಎ ನಾರಾಯಣ ಸ್ವಾಮಿ ಸ್ವಾಗತಿಸಿದರು.

ಚಿತ್ರದುರ್ಗ ನಗರದಲ್ಲಿ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಈ ಇಬ್ಬರು ನಾಯಕರು, ಒಳಮೀಸಲಾತಿ ಅನುಷ್ಠಾನಕ್ಕೆ ತರುವುದರಿಂದ ಯಾವುದೇ ಸಮುದಾಯದ ಜನರಿಗೆ ತೊಂದರೆಯಾಗುವುದಿಲ್ಲ ಎಂದ್ರು.

ಸಂಸದ ನಾರಾಯಣ ಸ್ವಾಮಿ ಮಾತನಾಡಿ, ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿರುವುದೇನೆಂದರೆ ಮೀಸಲಾತಿಯಲ್ಲಿ ಎಲ್ಲರಿಗೂ ಸಮಾನವಾಗಿ ಮೀಸಲಾತಿ ನೀಡ್ಬೇಕು, ಶೇ.6%ರಷ್ಟು ಮಾದಿಗ ಸಮುದಾಯಕ್ಕೆ, ಶೇ.5ರಷ್ಟು ಬಲಗೈ ಸಮುದಾಯಕ್ಕೆ, ಇನ್ನು ಶೇ.3ರಷ್ಟು ಭೋವಿ, ಲಂಬಾಣಿ ಎಲ್ಲರಿಗೂ‌ ಸಿಗುತ್ತದೆ ಹೊರತು ಯಾವುದೇ ಜಾತಿಯವರಿಗೆ ಅನ್ಯಾಯ ಆಗಿಲ್ಲ ಎಂದ್ರು.

ಮಾಜಿ ಸಚಿವ ಹೆಚ್ ಆಂಜನೇಯ ಮಾತನಾಡಿ, ಮೀಸಲಾತಿ ಜಡ್ಜ್‌ಮೆಂಟ್ 7 ಜನರ ಅಥವಾ 9 ಸದಸ್ಯರ ಪೀಠಕ್ಕೆ ಯಾವಾಗ ವರ್ಗಾವಣೆಯಾಗುತ್ತೋ ಗೊತ್ತಿಲ್ಲ. ಆದ್ದರಿಂದ ರಾಜ್ಯ-ಕೇಂದ್ರದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರಗಳು ಇರುವುದರಿಂದ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಒತ್ತಡ ಹೇರಬೇಕು ಎಂದು ಸಂಸದ ಎ ನಾರಾಯಣ ಸ್ವಾಮಿಯವರಿಗೆ ಮನವಿ ಮಾಡಿದರು. ಈ ವೇಳೆ ಕೊರಚ, ಕೊರಮ, ಭೋವಿ, ಲಂಬಾಣಿ ಸಮುದಾಯಗಳು ನಮ್ಮ ಜೊತೆ ಇರಲಿ. ಇವರಿಗೆ ಈ ಒಳಮೀಸಲಾತಿಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆಶ್ವಾಸನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.