ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದ ಗೌರಸಂದ್ರದ ಮಾರಮ್ಮ ಜಾತ್ರೆಯನ್ನು ಈ ಬಾರಿ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೇರಿಯವರ ಆದೇಶವನ್ನು ಧಿಕ್ಕರಿಸಿ ಭಕ್ತರು ಹರಕೆ ತೀರಿಸಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರದಲ್ಲಿ ನಡೆಯುವ ಜಾತ್ರೆ ಇದಾಗಿದ್ದು, ಬೆಳಗಿನ ಜಾವ ಜಿಲ್ಲಾಡಳಿತ ಹಾಗೂ ಪೊಲೀಸರ ಕಣ್ತಪ್ಪಿಸಿ ನೂರಾರು ಜನ ಭಕ್ತರು ಬೇವಿನ ಸೀರೆಯ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ. ಕೊರೊನಾ ಹಿನ್ನೆಲೆ ಜಿಲ್ಲಾಡಳಿತದ ಆದೇಶ ಇದ್ದರೂ ಭಕ್ತರು ಎಂದಿನಂತೆ ದೇವಿಯ ದರ್ಶನ, ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ.