ಚಿತ್ರದುರ್ಗ: ಇಲ್ಲಿನ ಆಜಾದ್ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ ಗೌಸಿಯಾ ಗಾಯಗೊಂಡಿದ್ದು, ಬಾಲಕಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ನಾಲ್ಕು ಬೀದಿ ನಾಯಿಗಳ ದಾಳಿಯಿಂದ ಗೌಸಿಯಾ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಮನೆ ಬಳಿ ಆಟವಾಡುವ ವೇಳೆ ಬಾಲಕಿ ಗೌಸಿಯಾಳನ್ನು ನಾಯಿಗಳು ಎಳೆದೊಯ್ದು, ಮೈ ತುಂಬಾ ಕಚ್ಚಿವೆ. ಗಾಯಾಳು ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ದೊರೆಯದ ಕಾರಣ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಜೀವನ್ಮರಣದ ನಡುವೆ ಹೋರಾಡುತ್ತಿರುವ ಬಾಲಕಿ ಸ್ಥಿತಿ ಕಂಡು ಸ್ಥಳೀಯರು ಆಕ್ರೋಶಗೊಂಡಿದ್ದು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ರು.