ETV Bharat / state

ಜೆಡಿಎಸ್​ ಸೇರಲಿದ್ದಾರೆ ಕಾಂಗ್ರೆಸ್‌ನ ಮಾಜಿ ಪರಿಷತ್ ಸದಸ್ಯ ರಘು ಆಚಾರ್ - ಚಿತ್ರದುರ್ಗದ ಆರು ಕ್ಷೇತ್ರದಲ್ಲಿ‌ ಜೆಡಿಎಸ್ ಗೆಲ್ಲಲಿದೆ

ಮಾಜಿ ಎಂಎಲ್​ಸಿ ರಘು ಆಚಾರ್​ ಅವರು ತಾವು ಬೇಷರತ್ತಾಗಿ ಜೆಡಿಎಸ್ ಪಕ್ಷ‌ ಸೇರ್ಪಡೆ ಆಗುತ್ತಿರುವುದಾಗಿ ತಿಳಿಸಿದ್ದಾರೆ.

Etv BharatFormer MLC Raghu Achar will join JDS on  april14
ಏ.14 ರಂದು ಜೆಡಿಎಸ್​ ಸೇರ್ಪಡೆಯಾಗಲಿರುವ ಮಾಜಿ MLC ರಘು ಆಚಾರ್
author img

By

Published : Apr 7, 2023, 7:26 PM IST

Updated : Apr 7, 2023, 7:41 PM IST

ಜೆಡಿಎಸ್​ ಸೇರಲಿರುವ ಕಾಂಗ್ರೆಸ್‌ನ ಮಾಜಿ ಪರಿಷತ್ ಸದಸ್ಯ ರಘು ಆಚಾರ್

ಚಿತ್ರದುರ್ಗ: ಮಾಜಿ ಎಂಎಲ್​ಸಿ ರಘು ಆಚಾರ್​ಗೆ ಕಾಂಗ್ರೆಸ್‌ನಿಂದ ಅನ್ಯಾಯ ಆಗಿದೆ ಎಂದು ಜೆಡಿಎಸ್ ಎಂಎಲ್​ಸಿ ಟಿ.ಎ.ಶರವಣ ಹೇಳಿದರು. ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿಂದು ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಘು ಆಚಾರ್ ತಮ್ಮ ಮನೆಗೆ ಊಟಕ್ಕೆ ಕರೆದಿದ್ದಾರೆ. ನಾವು ಅವರ ಮನೆಗೆ ಊಟಕ್ಕೆ ತೆರಳುತ್ತಿದ್ದೇವೆ, ರಘು ಆಚಾರ್​ರನ್ನು ಜೆಡಿಎಸ್‌ಗೆ ಆಹ್ವಾನಿಸುತ್ತೇವೆ ಎಂದರು. ಇದೇ ವೇಳೆ ರಾಷ್ಟ್ರೀಯ ಪಕ್ಷಗಳ‌ ಅವ್ಯವಸ್ಥೆಯಿಂದ ಬೇಸತ್ತು ಬಿಜೆಪಿ ಮತ್ತು ಕಾಂಗ್ರೆಸ್​ನ ಅನೇಕರು ಜೆಡಿಎಸ್​ನತ್ತ ಬರುತ್ತಿದ್ದಾರೆ ಎಂದು ಹೇಳಿದರು.

ಬಳಿಕ ಮಾತನಾಡಿದ ರಘು ಆಚಾರ್, ಏಪ್ರಿಲ್‌ 14 ರಂದು ಬೆಂಗಳೂರಿನ ಜೆ.ಪಿ ಭವನದಲ್ಲಿ ಬೇಷರತ್ತಾಗಿ ಜೆಡಿಎಸ್ ಸೇರ್ಪಡೆ ಆಗುತ್ತಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗದ ಆರು ಕ್ಷೇತ್ರದಲ್ಲಿ‌ ಜೆಡಿಎಸ್ ಗೆಲ್ಲಲಿದೆ. ಸ್ವಾಭಿಮಾನಕ್ಕೆ ಚ್ಯುತಿ ತಂದವರಿಗೆ ತಕ್ಕ ಉತ್ತರ ನೀಡುತ್ತೇನೆ ಎಂದರು.

ಇದನ್ನೂ ಓದಿ:ಸಿಗದ ಕಾಂಗ್ರೆಸ್‌ ಟಿಕೆಟ್‌; ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾದ ಹರಪಳ್ಳಿ ರವೀಂದ್ರ

Last Updated : Apr 7, 2023, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.