ಚಿತ್ರದುರ್ಗ : ರಾಜ್ಯದಲ್ಲಿ ಸಚಿವ ಶ್ರೀರಾಮುಲುರನ್ನು ಬುರುಡೆ ಶ್ರೀರಾಮುಲು ಎಂದು ಕರೆಯುತ್ತಿದ್ದು, ಶ್ರೀರಾಮುಲು ಮೊಳಕಾಲ್ಮೂರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ, ತುಂಗಭದ್ರಾ ಯೋಜನೆ ಆಗಿದ್ದು ನನ್ನ ಕಾಲದಲ್ಲಿ, ಈಗ ಈ ಯೋಜನೆಗಳು ತಾನೇ ಮಾಡಿದ್ದು ಎಂದು ಶ್ರೀರಾಮುಲು ಬುರುಡೆ ಬಿಡುತ್ತಿದ್ದಾನೆ. ಶ್ರೀರಾಮುಲುಗೆ ಒಂದೊಂದು ಆಫೀಸಿಗೆ ಒಬ್ಬೊಬ್ಬರು ಪಿಎಗಳಿದ್ದು, ಶಾಸಕ, ಸಚಿವರ ಲೆಟರ್ ಹೆಡ್ ನೀಡಲು ಹತ್ತು ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ವಾಲ್ಮೀಕಿ ಸಮಾಜ ಎಂದು ಹೇಳಿಕೊಂಡು ಬಂದ ಇವರು ಬೊಯಾ (ಜಾತಿ)ರವರು, ಮೊಳಕಾಲ್ಮೂರಿನಲ್ಲಿ ಮರಳು ದಂಧೆ, ಕ್ರಷರ್ ಹಾಕಿಸಿ ಲೂಟಿ ಮಾಡುತ್ತಿದ್ದಾರೆ. ಬಿಎಸ್ವೈ ಸಿಎಂ ಆದಾಗ ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲಾತಿ ನೀಡಿಸುವುದಾಗಿ ಮಾತು ನೀಡಿದ್ದರು. ರಕ್ತದಲ್ಲಿ ಬರೆದು ಕೊಡುತ್ತೇನೆಂದಿದ್ದ ಶ್ರೀರಾಮುಲು ಮಾತು ತಪ್ಪಿದ್ದಾರೆ.
ಶ್ರೀರಾಮುಲುರಂತಹ ಸುಳ್ಳನ್ನು ಬಿಎಸ್ವೈ ಸಚಿವ ಸಂಪುಟದಲ್ಲಿಟ್ಟುಕೊಂಡಿದ್ದಾರೆ. ಮೊದಲು ಇಂತಹವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.