ETV Bharat / state

ಕೇಂದ್ರ ಸರ್ಕಾರ ಕೈ ಮುಖಂಡರ ಮೇಲೆ ಪದೇ - ಪದೆ ರಾಜಕೀಯ‌ ಒತ್ತಡ ಹೇರುತ್ತಿದೆ: ಪ್ರಿಯಾಂಕ್​ ಖರ್ಗೆ - ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ

ಕೇಂದ್ರ ಸರ್ಕಾರದ ಏಜೆನ್ಸಿಗಳು ನಮ್ಮ ಮುಖಂಡರ ಮೇಲೆ ಒತ್ತಡದ ತಂತ್ರವನ್ನು ಬಳಕೆ ಮಾಡುತ್ತಿವೆ. ಆರ್.ಆರ್​.ನಗರ ಹಾಗೂ ಶಿರಾ ಉಪಚುನಾವಣೆಗೂ ಮುನ್ನ ಸಿಬಿಐನವರು ಏಕಾಏಕಿ ಡಿ.ಕೆ.ಶಿವಕುಮಾರ್​ ಮನೆ ಮೇಲೆ ದಾಳಿ ನಡೆಸಿದ್ದರು. ಇದೀಗ ವಿನಯ್ ಕುಲಕರ್ಣಿ ವಶಕ್ಕೆ ಪಡೆದಿದ್ದಾರೆಂದು ಸಚಿವ ಪ್ರಿಯಾಂಕ್​​ ಖರ್ಗೆ ಕಿಡಿಕಾರಿದರು.

Former Minister Priyanka Kharge reaction about Vinay Kulkarni arrest
ಕೇಂದ್ರಸರ್ಕಾರ ಕೈ ಮುಖಂಡರ ಮೇಲೆ ಪದೇ-ಪದೇ ರಾಜಕೀಯ‌ ಒತ್ತಡ ಹೇರುತ್ತಿದೆ: ಪ್ರಿಯಾಂಕ ಖರ್ಗೆ
author img

By

Published : Nov 5, 2020, 3:26 PM IST

ಚಿತ್ರದುರ್ಗ: ಕೇಂದ್ರ ಸರ್ಕಾರ ಸ್ಥಳೀಯ ಕೈ ಮುಖಂಡರ ಮೇಲೆ ಪದೇ-ಪದೆ ರಾಜಕೀಯ‌ ಒತ್ತಡ ತರುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ವಶ ಖಂಡಿಸಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರ ಕೈ ಮುಖಂಡರ ಮೇಲೆ ಪದೇ-ಪದೇ ರಾಜಕೀಯ‌ ಒತ್ತಡ ಹೇರುತ್ತಿದೆ: ಪ್ರಿಯಾಂಕ ಖರ್ಗೆ

ವಿನಯ್ ಕುಲಕರ್ಣಿ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು, ವಿನಯ್ ಕುಲಕರ್ಣಿಯವರನ್ನು ಸಿಬಿಐ ತನಿಖೆ ಮಾಡಲಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಇದೇ ರೀತಿ ಆಗಿತ್ತು. ಕೇಂದ್ರ ಸರ್ಕಾರದ ಏಜೆನ್ಸಿಗಳು ನಮ್ಮ ಮುಖಂಡರ ಮೇಲೆ ಒತ್ತಡದ ತಂತ್ರವನ್ನು ಬಳಕೆ ಮಾಡುತ್ತಿವೆ. ಆರ್.ಆರ್​.ನಗರ ಹಾಗೂ ಶಿರಾ ಉಪಚುನಾವಣೆಯ ಮುನ್ನ ಸಿಬಿಐನವರು ಏಕಾಏಕಿ ಡಿ.ಕೆ.ಶಿವಕುಮಾರ್​ ಅವರ ಮನೆ ಮೇಲೆ ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಹೆದರಿಸುವ-ಬೆದರಿಸುವ ತಂತ್ರವನ್ನು ಬಳಕೆ ಮಾಡುತ್ತಿದೆ. ವಿರೋಧ ಪಕ್ಷಗಳು ಎಲ್ಲೆಲ್ಲಿ ಬಲವಾಗಿವೆಯೋ, ಎಲ್ಲೆಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಪ್ರಶ್ನೆಗಳನ್ನು ಕೇಳ್ತಿದ್ದಾರೋ ಅಲ್ಲಲ್ಲಿ ಇತಂಹ‌ ದಾಳಿ ನಡೆಯುತ್ತಿವೆ. ಮಧ್ಯಪ್ರದೇಶದಲ್ಲಿ ವ್ಯಾಪಂ ಎಂಬ ಹಗರಣ ಆಗಿದ್ದರೂ ತನಿಖೆ ಮಾಡದೇ ನಮ್ಮ ಮುಖಂಡರನ್ನು ಆಯ್ಕೆ ಮಾಡಿ ದಾಳಿ ನಡೆಸಲಾಗುತ್ತಿದೆ. ಸರ್ಕಾರಗಳಿಗೆ ಪ್ರಶ್ನೆ ಮಾಡುವ ಹಕ್ಕು ನಮಗಿದೆ. ಇಂತಹ ದಾಳಿಗಳಿಗೆ ನಾವು ಕುಗ್ಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.