ಚಿತ್ರದುರ್ಗ : ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಬೈ ಎಲೆಕ್ಷನ್ಗಾಗಿ ಎರಡು ದಿನ ಪ್ರವಾಸ ನಿಗದಿಯಾಗಿದೆ. ಎರಡು ಕ್ಷೇತ್ರ ಹೆಚ್ಚು ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಅವರ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲಾ ಚುನಾವಣೆ ಅತ್ಯಂತ ಮುಖ್ಯ, ಸರ್ಕಾರದ ಮೇಲೆ ಪರಿಣಾಮ ಆಗಲ್ಲ. ಎರಡು ಕ್ಷೇತ್ರ ಗೆಲ್ಲುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಆರು ಬಾರಿ ಶಾಸಕರಾಗಿ ಕ್ಷೇತ್ರದ ಜನರ ಮನಸ್ಸಿನಲ್ಲಿ ಉಳಿದವರು. ಇವರಿಗೆ ಒಂದಲ್ಲ ಒಂದು ಕಾರಣಕ್ಕೆ ಮಂತ್ರಿ ಮಾಡದೇ ಅನ್ಯಾಯವಾಗಿದೆ. ಈ ವಿಚಾರವಾಗಿ ಸಿಎಂ ಜೊತೆಗೆ ಮಾತನಾಡುವೆ. ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಅವಕಾಶಕ್ಕೆ ಪ್ರಯತ್ನ ಮಾಡುವೆ ಎಂದು ಶಾಸಕ ತಿಪ್ಪಾರೆಡ್ಡಿ ಅವರಿಗೆ ಭರವಸೆ ನೀಡಿದರು.
ಈಗಾಗಲೇ ಕಾಂಗ್ರೆಸ್ನಲ್ಲಿ ಪರಸ್ಪರ ಕಚ್ಚಾಟ, ಬಡಿದಾಟ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಒಂದು ದಿಕ್ಕು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒಂದು ದಿಕ್ಕು ಆಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ನಾವು ಪ್ರಧಾನಿ ಮೋದಿಯವರ ಅಭಿವೃದ್ಧಿಯಿಂದ ನೂರಕ್ಕೆ ನೂರು ಗೆಲ್ಲುತ್ತೇವೆ. ನಮ್ಮ ಸಾಧನೆ ಜನರಿಗೆ ತಿಳಿಸಿ ದೊಡ್ಡ ಅಂತರದಲ್ಲಿ ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದರು.
ಪ್ರಧಾನಿ ಮೋದಿ ಸರ್ಕಾರ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸು ಗೆದ್ದಿವೆ. ಪ್ರಧಾನಿ ಮೋದಿ ಒಬ್ಬ ಹೆಬ್ಬೆಟ್ಟು ಎಂಬ ಕೆಪಿಸಿಸಿ ಟ್ಟೀಟ್ ವಿಚಾರವಾಗಿ ಮಾತನಾಡಿದ ಅವರು, ಇಂಥ ಶಬ್ಧ ಉಪಯೋಗಿಸುವುದು ಶೋಭೆ ತರುವಂತದ್ದಲ್ಲ.
ವಿಶ್ವವೇ ಪ್ರಧಾನಿ ಅವರನ್ನ ದೊಡ್ಡ ನಾಯಕ ಎಂದು ಒಪ್ಪಿದೆ. ಹಾಗಿರುವಾಗ ಕಾಂಗ್ರೆಸ್ ಅವರ ಸಂಸ್ಕೃತಿ, ಅವರ ಯೋಗ್ಯತೆ ಏನು ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ನಾಯಕರು ರಾಜ್ಯ ಮತ್ತು ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದರು.
ಬಿ ವೈ ವಿಜಯೇಂದ್ರರಿಗೆ ಮಂತ್ರಿ ಸ್ಥಾನದ ವಿಚಾರ. ಆ ಪ್ರಶ್ನೆಯೇ ಬರುವುದಿಲ್ಲ. ಮಂತ್ರಿ ಸ್ಥಾನ ಕೇಳಿಲ್ಲ. ಬರುವ ದಿನಗಳಲ್ಲಿ ಏನಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ಸಿಎಂ ಉದಾಸಿ ಸಾವಿಗೆ ಬಿಜೆಪಿ ಕಾರಣ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈ ರೀತಿ ಹಗುರವಾಗಿ ಮಾತನಾಡಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರುವ ಹಡುಗು. ಕರ್ನಾಟಕದಲ್ಲಿ ಇನ್ನೂ ಉಸಿರಾಡುತ್ತಿದೆ. ಮಾತನಾಡಿ ಮಾತನಾಡಿ ಅದನ್ನು ಸಹ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.